• June 4, 2026

ಡಿವೋರ್ಸ್ ಬಳಿಕ ಯಶಸ್ಸಿನ ಮೆಟ್ಟಿಲೇರಿದ ಸಮಂತಾ, ನಾಗಚೈತನ್ಯ ಕೈ ಹಿಡಿಯದ ಸಿನಿ ರಸಿಕರು

ನಟಿ ಸಮಂತಾ ಹಾಗೂ ನಾಗ ಚೈತನ್ಯ ದೂರವಾಗಿ ಸಾಕಷ್ಟು ತಿಂಗಳುಗಳೇ ಕಳೆದುಹೋಗಿದೆ. ಇದುವರೆಗೂ ಈ ಜೋಡಿ ಡಿವೋರ್ಸ್ ಪಡೆದುಕೊಳ್ಳುವುದಕ್ಕೆ ಕಾರಣ ಏನು ಅನ್ನೋದು ಮಾತ್ರ ಯಾರಿಗೂ ಗೊತ್ತಿಲ್ಲ. ಅತ್ತ ಡಿವೋರ್ಸ್ ಬಳಿಕ ಸಮಂತ ಯಶಸ್ಸಿನ ಏಟಿ ಏರುತ್ತಿದ್ದರೆ ಇತ್ತ ನಾಗಚೈತನ್ಯ ಸೋಲಿನ ರುಚಿ ಕಂಡಿದ್ದಾರೆ. ಡಿವೋರ್ಸ್ ಬಳಿಕ ನಾಗಚೈತನ್ಯ ನಟನೆಯ ಥ್ಯಾಂಕ್ ಯೂ ಸಿನಿಮಾ ಬಿಡುಗಡೆ ಆಗಿದೆ. ಆದರೆ ಅಭಿಮಾನಿಗಳಿಗೆ ಸಿನಿಮಾ ನಿರಾಸೆ ಮೂಡಿಸಿದ್ದು ಹೇಳಿಕೊಳ್ಳುವ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಸ್ವತಃ ನಾಗಚೈತನ್ಯ ಅಭಿಮಾನಿಗಳೇ ಸಿನಿಮಾದ ಬಗ್ಗೆ ನೆಗೆಟೀವ್ ಕಾಮೆಂಟ್ ಮಾಡಿದ್ದಾರೆ. ಇತ್ತ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಸಿನಿಮಾ ಮಕಾಡೆ ಮಲಗಿದ್ದು ನಾಗಚೈತನ್ಯಗೆ ಸಹಜವಾಗಿಯೇ ಸಾಕಷ್ಟು ನೋವಾಗಿದೆ. ಸದ್ಯ ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಛಡ್ಡಾ ಸಿನಿಮಾ ರಿಲೀಸ್ ಗೆ ರೆಡಿಯಾಗಿದ್ದು. ಈ ಸಿನಿಮಾದಲ್ಲಿ ನಟ ನಾಗಚೈತನ್ಯ ಕೂಡ ನಟಿಸಿದ್ದು ಈಗಾಗ್ಲೆ ಟ್ರೈಲರ್ ಸಖತ್ ಸದ್ದು ಮಾಡ್ತಿದೆ. ಸದ್ಯ ರಿಲೀಸ್ ಗೆ ರೆಡಿಯಾಗಿರೋ ಲಾಲ್ ಸಿಂಗ್ ಛಡ್ಡಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಹೀಗಾಗಿ ಥ್ಯಾಂಕ್ ಯೂ ಸಿನಿಮಾದ ನೋವನ್ನು ಲಾಲ್ ಸಿಂಗ್ ಛಡ್ಡಾ ಸಿನಿಮಾ ಮರೆಸಬಹುದು ಎನ್ನಲಾಗುತ್ತಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now