• January 1, 2026

ಸಮಂತಾಗೆ ಗಂಭೀರ ಆರೋಗ್ಯ ಸಮಸ್ಯೆ: ಸ್ಪಷ್ಟನೆ ನೀಡಿದ ಸ್ಯಾಮ್ ಮ್ಯಾನೇಜರ್

ಟಾಲಿವುಡ್ ಸ್ಟಾರ್ ನಟಿ ಸಮಂತಾ ಸದ್ಯ ಸಖತ್ ಬ್ಯುಸಿಯಾಗಿದ್ದಾರೆ. ಪರಭಾಷೆಯಲ್ಲೂ ಸಾಕಷ್ಟು ಬೇಡಿಕೆ ಕಾಯ್ದುಕೊಂಡಿರುವ ಸಮಂತಾ ಇದೀಗ ಆರೋಗ್ಯದ ಕುರಿತಾಗಿ ಸುದ್ದಿಯಾಗಿದ್ದಾರೆ. ಸಮಂತಾಗೆ ಗಂಭೀರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದು ಇದರ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿದ್ದಾರೆ ಎನ್ನಲಾಗುತ್ತಿದೆ. ಸಮಂತಾ ಚರ್ಮದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಸಮಂತಾ ಅವರು ಮೇಕಪ್ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೇ ಕಾರಣಕ್ಕೆ ಸಮಂತಾ ಸಾರ್ವಜನಿಕ ಕಾರ್ಯಕ್ರಮ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎನ್ನಲಾಗುತ್ತಿದೆ. ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಇರಲು ವೈದ್ಯರು ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ ಸಮಂತಾ ಟ್ರಿಟ್ ಮೆಂಟ್ ಗಾಗಿ ವಿದೇಶಕ್ಕೆ ತೆರಳುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿದೆ. ಸದ್ಯ ಈ ಸುದ್ದಿಗೆ ಸಮಂತಾ ಮ್ಯಾನೇಜರ್ ಸ್ಪಷ್ಟನೆ ನೀಡಿದ್ದಾರೆ. ಸಮಂತಾ ಸಂಪೂರ್ಣ ಆರೋಗ್ಯವಾಗಿದ್ದಾರೆ. ಅವರಿಗೆ ಯಾವುದೇ ಆರೋಗ್ಯ ಸಮಸ್ಯೆ ಕಂಡು ಇಲ್ಲ. ಸಮಂತಾ ಆರೋಗ್ಯದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಎಲ್ಲಾ ಸುದ್ದಿಗಳು ಸುಳ್ಳು. ಸಮಂತಾ ಬಗ್ಗೆ ಕೆಲವರು ಫೇಕ್ ನ್ಯೂಸ್ ಕ್ರಿಯೇಟ್ ಮಾಡುತ್ತಿದ್ದು, ಇಂತಹ ಫೇಕ್ ನ್ಯೂಸ್ ಸೃಷ್ಟಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಮಂತಾ ಯೋಚಿಸಿದ್ದಾರೆ ಎಂದು ಸಮಂತಾ ಮ್ಯಾನೇಜರ್ ಹೇಳಿದ್ದಾರೆ. ಆದರೆ ಸಮಂತಾ ಅಮೆರಿಕಾಕ್ಕೆ ಹೋಗುತ್ತಿರುವುದು ಏಕೆ ಅನ್ನೋದರ ಕುರಿತಾಗಿ ಸಮಂತಾ ಮ್ಯಾನೇಜರ್ ಸ್ಪಷ್ಟನೆ ನೀಡಿಲ್ಲ. ಸಮಂತಾ ಆರೋಗ್ಯವಾಗಿದ್ದು ಸದ್ಯದಲ್ಲೇ ಶೂಟಿಂಗ್ ನಲ್ಲಿ ಭಾಗಿಯಾಲಿದ್ದಾರೆ ಎಂದು ಮ್ಯಾನೇಜರ್ ಹೇಳಿದ್ದಾರೆ. ಸಮಂತಾ ಆರೋಗ್ಯದ ಸುದ್ದಿ ಕೇಳಿದ ಅಭಿಮಾನಿಗಳು ಕೊಂಚ ನಿರಾಳರಾಗಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now