ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಬಿಗ್ ಬಾಸ್ ನಿರೂಪಣೆಗೆ ಸಾವಿರ ಕೋಟಿ ಸಂಭಾವನೆ ಪಡೆದ ಸಲ್ಮಾನ್ ಖಾನ್! ಕಿಚ್ಚ ಸುದೀಪ್ ಪಡೆದುಕೊಳ್ಳೋದೆಷ್ಟು ಗೊತ್ತಾ?
ಸಲ್ಮಾನ್ ಖಾನ್ ಈ ಹಿಂದೆ ಬಿಗ್ ಬಾಸ್ ಕಾರ್ಯಕ್ರಮ ನಡೆಸಿಕೊಡಲು 350 ಕೋಟಿ ಸಂಭಾವನೆ ಪಡೆದುಕೊಳ್ಳುತ್ತಿದ್ದರು. ಆದರೆ ಬಿಗ್ ಬಾಸ್ ಸೀಸನ್ 16 ಟಿವಿ ಹಾಗೂ ಒಟಿಟಿಯಲ್ಲಿ ಪ್ರಸಾರವಾಗುತ್ತಿದ್ದು ಎರಡಕ್ಕೂ ಪ್ರತ್ಯೇಕ ಕಾರ್ಯಕ್ರಮ ನಡೆಸಿಕೊಡಬೇಕಿದೆ. ಹೀಗಾಗಿ ಸಲ್ಮಾನ್ ಬರೋಬ್ಬರಿ ಸಾವಿರ ಕೋಟಿ ಸಂಭಾವನೆ ಪಡೆದುಕೊಳ್ತಿದ್ದಾರೆ ಎನ್ನಲಾಗ್ತಿದ್ದೆ.
ಬಾಲಿವುಡ್ ನಲ್ಲಿ ಸಲ್ಮಾನ್ ಸಂಭಾವನೆ ಬಗ್ಗೆ ಚರ್ಚೆ ಶುರುವಾಗುತ್ತಿದ್ದಂತೆ ಇತ್ತ ಸ್ಯಾಂಡಲ್ ವುಡ್ ನಲ್ಲಿ ಬಿಗ್ ಬಾಸ್ ಕಾರ್ಯಕ್ರಮ ನಡೆಸಿಕೊಡಲು ಸುದೀಪ್ ಪಡೆದುಕೊಳ್ಳುತ್ತಿರುವ ಸಂಭಾವನೆ ಬಗ್ಗೆ ಮಾತುಕತೆ ಶುರುವಾಗಿದೆ. ಕಿಚ್ಚ ಸುದೀಪ್ ಬಿಗ್ ಬಾಸ್ ನಿರೂಪಣೆ ಮಾಡಲು ದುಬಾರಿ ಸಂಭಾವನೆಯನ್ನೇ ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.
ಮೂಲಗಳ ಪ್ರಕಾರ ಸುದೀಪ್ ನೂರಾರು ಕೋಟಿ ಪಡೆದುಕೊಳ್ಳುತ್ತಾರೆ ಎನ್ನಲಾಗ್ತಿದೆ. ಆದರೆ ಈ ನೂರು ಕೋಟಿಯಲ್ಲಿ ಬೇರೆ ಬೇರೆ ಲೆಕ್ಕಾಚಾರಗಳು ಇರುತ್ತವೆ ಎನ್ನುತ್ತಿವೆ ಮೂಲಗಳು
