• January 2, 2026

ಬಿಗ್ ಬಾಸ್ ನಿರೂಪಣೆಯಿಂದ ಹೊರ ಬಂದ ಸಲ್ಮಾನ್ ಖಾನ್

ಸಲ್ಮಾನ್ ಖಾನ್ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಹಿಂದಿಯ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಸಾಕಷ್ಟು ಖ್ಯಾತಿ ಘಳಿಸಿದೆ. ಬಿಗ್ ಬಾಸ್ ಸೀಸನ್ 16 ಸಾಕಷ್ಟು ವಿಚಾರಗಳಿಂದ ಹೈಲೈಟ್ ಆಗಿದೆ. ಇದೀಗ ಬಿಗ್ ಬಾಸ್ ಕಡೆಯಿಂದ ಮತ್ತೊಂದು ಸುದ್ದಿ ಹೊರ ಬಿದ್ದಿದೆ. ಶೋ ಆರಂಭವಾದ ಸಂದರ್ಭದಿಂದಲೂ ಬಿಗ್ ಬಾಸ್ ಕಾರ್ಯಕ್ರಮವನ್ನು ಸಲ್ಮಾನ್ ಖಾನ್ ನಿರೂಪಣೆ ಮಾಡ್ತಿದ್ದಾರೆ. ಸಲ್ಲು ಬಾಯ್ ನಿರೂಪಣೆ ಕಾರ್ಯಕ್ರಮಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. ಆದರೆ ಇದೀಗ ಸಲ್ಲು ಕಾರ್ಯಕ್ರಮದಿಂದ ಹೊರ ಬಂದಿದ್ದಾರೆ. ಹಿಂದಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಸಾಕಷ್ಟು ಅಭಿಮಾನಿಗಳಿದ್ದಾರೆ. ವೀಕೆಂಡ್ ನಲ್ಲಿ ಸಲ್ಲು ನಿರೂಪಣೆ ನೋಡಲು ಸಾಕಷ್ಟು ಮಂದಿ ಕಾದು ಕೂತಿರ್ತಾರೆ. ಆದರೆ ಅನಾರೋಗ್ಯದ ಕಾರಣದಿಂದ ಸಲ್ಮಾನ್ ಖಾನ್ ಕಾರ್ಯಕ್ರಮದಿಂದ ಹೊರ ಬಂದಿದ್ದಾರೆ ಎನ್ನಲಾಗುತ್ತಿದೆ. ಸಲ್ಲುಗೆ ಡೆಂಗ್ಯೂ ಜ್ವರ ಇರುವುದು ದೃಡ ಪಟ್ಟಿದೆ. ಹೀಗಾಗಿ ಬಿಗ್ ಬಾಸ್ ನಿರೂಪಣೆಯಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದಾರೆ.  ಶುಕ್ರವಾರ ಮತ್ತು ಶನಿವಾರದ ಸಂಚಿಕೆಗಳು ಗುರುವಾರವೇ ಶೂಟ್ ಮಾಡುತ್ತಾರೆ. ಈ ಶೂಟ್‌ಗೆ ನಟ ಗೈರಾಗಿದ್ದಾರೆ. ಇನ್ನೂ ನೆಚ್ಚಿನ ನಟ ಸಲ್ಲು ಶೀಘ್ರದಲ್ಲಿ ಗುಣಮುಖವಾಗಲಿ ಎಂದು ಫ್ಯಾನ್ಸ್ ಹಾರೈಸಿದ್ದಾರೆ. ಸಲ್ಮಾನ್ ಖಾನ್ ಬದಲಾಗಿ ಕರಣ್ ಜೋಹರ್ ಬಿಗ್ ಬಾಸ್ 16ರ ಮುಂಬರುವ ಮೂರು ಸಂಚಿಕೆಗಳ ನಿರೂಪಣೆ ಮಾಡಲಿದ್ದಾರೆ. ದೀಪಾವಳಿ ವಿಶೇಷ ಸೇರಿದಂತೆ ಬಿಗ್ ಬಾಸ್‌ನ ಮೂರು ಸಂಚಿಕೆಗಳಿಗೆ ಚಿತ್ರೀಕರಣ ಮಾಡಲಿದ್ದಾರೆ. ಇದು ಶನಿವಾರ ಮತ್ತು ಭಾನುವಾರದ ಬದಲಾಗಿ ಸೋಮವಾರ ಪ್ರಸಾರವಾಗಲಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now