• January 1, 2026

ಅಮೆರಿಕಾಗೆ ಹೊರಟು ನಿಂತಾ ಸಪ್ತಮಿ ಗೌಡಗೆ ಲೀಲಾ ಪಾತ್ರ ಸಿಕ್ಕಿದ್ದು ಹೇಗೆ?

ಈಗ ಎಲ್ಲಿ ನೋಡಿದ್ರು ಕಾಂತಾರ ಸಿನಿಮಾದ್ದೆ ಸದ್ದು. ಕನ್ನಡದ ಜೊತೆಗೆ ಪರಭಾಷೆಯಲ್ಲೂ ಕಾಂತಾರದ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ಹುಟ್ಟುಹಾಕಿದೆ. ಕಳೆದ ಮೂರು ವಾರಗಳ ಹಿಂದೆ ಬಿಡುಗಡೆಯಾದ ಕಾಂತಾರ ಬೇರೆಲ್ಲಾ ಸ್ಟಾರ್ ಕಲಾವಿಧರ ಸಿನಿಮಾಗಳನ್ನು ಹಿಂದಿಕ್ಕಿ ಸಿನಿಮಾ ಗೆದ್ದು  ಬೀಗಿದೆ. ಕಥೆಯಲ್ಲಿ ಮಾತ್ರವಲ್ಲ ರಿಷಬ್ ಶೆಟ್ಟಿ ಪಾತ್ರಗಳ ಆಯ್ಕೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಪಾತ್ರಕ್ಕೆ ಒಪ್ಪುವಂತ ಕಲಾವಿದರನ್ನೇ ಆಯ್ಕೆ ಮಾಡಿ ಪಾತ್ರಕ್ಕೆ ಮತ್ತಷ್ಟು ಬಲ ತಂದುಕೊಟ್ಟಿದ್ದಾರೆ. ನಟಿ ಸಪ್ತಮಿ ಗೌಡ ಲೀಲಾ ಪಾತ್ರದಲ್ಲಿ  ನಟಿಸಿದ್ದು ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಶಿವನಿಗೆ ತಕ್ಕ ಲೀಲಾ ಆಗಿ ಮೋಡಿ ಮಾಡಿರುವ ಸಪ್ತಮಿ ಗೌಡ ಚಿತ್ರದಲ್ಲಿ ಫಾರೆಸ್ಟ್ ಗಾರ್ಡ್ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಲಾಕ್‌ಡೌನ್ ಆಗದೇ ಹೋಗಿದ್ದರೆ ಸಪ್ತಮಿ ಗೌಡ ಈಗ ಅಮೆರಿಕಾದಲ್ಲಿ ಇರುತ್ತಿದ್ದರು. ‘ಕಾಂತಾರ’ ಚಿತ್ರದಲ್ಲಿ ನಟಿಸಲು ಸಾಧ್ಯವಾಗುತ್ತಿರಲಿಲ್ಲ ಎಂಬುದನ್ನು ಸಪ್ತಮಿ ಗೌಡ ತಂದೆ ನಿವೃತ್ತ ಪೊಲೀಸ್ ಅಧಿಕಾರಿ ಎಸ್ ಕೆ ಉಮೇಶ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಸೂರಿ ನಿರ್ದೇಶನದ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಮುಗಿದು ಆರು ತಿಂಗಳ ಬಳಿಕ ಮಗಳು ಅಮೆರಿಕಾಗೆ ಹೋಗಿ ಎಂಎಸ್ ಮಾಡ್ತಿನಿ ಎಂದಳು. ವೀಸಾ ಸಿಕ್ಕಿತ್ತು. ಅದೇ ಸಮಯದಲ್ಲಿ ಕೊರೊನಾ ಆರಂಭವಾಗಿ ಲಾಕ್‌ಡೌನ್ ಘೋಷಣೆ ಆಯಿತು. ಇಲ್ಲದೇ ಹೋಗಿದ್ದರೆ ಆಕೆ ಅಮೆರಿಕಾಗೆ ಹೋಗಿಬಿಡುತ್ತಿದ್ದಳು. ಇಂತಹ ಸಮಯದಲ್ಲಿ ಸಾಕಷ್ಟು ಕಥೆಗಳು ಬರ್ತಿತ್ತು. ಯಾವುದು ಇಷ್ಟವಾಗಲಿಲ್ಲ. ಮೊದಲ ಚಿತ್ರಕ್ಕೆ ಸೈಮಾ ಬೆಸ್ಟ್ ಡೆಬ್ಯು ಅವಾರ್ಡ್ ಕೂಡ ಬಂದಿತ್ತು. ನಂತರ ‘ಕಾಂತಾರ’ ಚಿತ್ರದ ಆಡಿಷನ್‌ ನಡೆದು ಲೀಲಾ ಪಾತ್ರದ ಅವಕಾಶ ಸಿಕ್ತು” ಎಂದು ಎಸ್.ಕೆ ಉಮೇಶ್ ಹೇಳಿದ್ದಾರೆ. ಚಿತ್ರತಂಡದವರೇ ಸಪ್ತಮಿಯನ್ನು ಕರೆಸಿ ಮಾತನಾಡಿಸಿದ್ದರು. ಲುಕ್ ಟೆಸ್ಟ್ ಎಲ್ಲಾ ಓಕೆ ಆಗಿ ನಂತರ ಒಂದು ದಿನ ಕುಂದಾಪುರದಲ್ಲಿ ಸಿನಿಮಾದ ಮುಹೂರ್ತ ಮಾಡಿದ್ದರು. ಅಂದು ಚಿತ್ರದ ನಾಯಕಿ ಸಪ್ತಮಿ ಗೌಡ ಎಂದು ಚಿತ್ರದತಂಡ ಘೋಷಿಸಿದರು ಎಂದು ನಟಿ ಸಪ್ತಮಿ ಗೌಡ ತಂದೆ ಎಸ್ ಕೆ ಉಮೇಶ್ ಹೇಳಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now