ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಸುದೀಪ್ ಎಚ್ಚರಿಕೆ ಮಾತಿನ ಬಳಿಕ ಸಾನ್ಯಾರಿಂದ ದೂರವಾದ ರೂಪೇಶ್ ಶೆಟ್ಟಿ
ಆದರೆ ಇತ್ತೀಚೆಗೆ ಇಬ್ಬರು ನಡುವಿನ ಕ್ಲೋಸ್ ನೆಸ್ ಮತ್ತಷ್ಟು ಹೆಚ್ಚಾಗಿದೆ. ಬಿಗ್ ಬಾಸ್ ಮನೆಯ ಕ್ಯಾಪ್ಟೆನ್ಸಿ ರೂಮ್ ನಲ್ಲಿ ರೂಪೇಶ್ ಶೆಟ್ಟಿ ಮೈಮೇಲೆ ಸಾನ್ಯ ಅಯ್ಯರ್ ಮಲಗಿಕೊಂಡಿದ್ದರು. ರೂಪೇಶ್ ಶೆಟ್ಟಿ ತಮ್ಮ ತೊಳಿನಿಂದ ಸಾನ್ಯ ಅಯ್ಯರ್ ಅನ್ನು ಬಿಗಿದಪ್ಪಿದ್ದರು. ಇದನ್ನು ಬಿಗ್ ಬಾಸ್ ನೋಟಿಸ್ ಮಾಡಿದ್ದರು. ಬಳಿಕ ವಾರದ ಕೊನೆಯಲ್ಲಿ ಸುದೀಪ್ ಅವರ ವರ್ತನೆಗೆ ಖಡಕ್ ಎಚ್ಚರಿಕೆ ನೀಡಿದ್ದರು. ಬಳಿಕ ಇಬ್ಬರಿಗೂ ಸಮಾಧಾನ ಮಾಡಿದ್ದ ಸುದೀಪ್ ಕೆಲಸದ ಕಡೆ ಗಮನ ಹರಿಸುವಂತೆ ಸೂಚಿಸಿದ್ದರು.
ಸುದೀಪ್ ಎಚ್ಚರಿಕೆ ನೀಡಿದ ಬಳಿಕ ರೂಪೇಶ್ ಸಾನ್ಯಾರಿಂದ ಅಂತರ ಕಾಯ್ದುಕೊಂಡಿದ್ದಾರೆ. ಸದಾ ಸಾನ್ಯಾ ಜೊತೆಯೇ ಕೂತು ಊಟ ಮಾಡುತ್ತಿದ್ದ ರೂಪೇಶ್ ಇದೀಗ ಬೇರೆಯೇ ಕೂಡ ಊಟ ಮಾಡ್ತಿದ್ದಾರೆ. ರೂಪೇಶ್ ಜೊತೆ ಊಟ ಮಾಡಲು ಸಾನ್ಯಾ ಕಾಯುತ್ತಿದ್ದರು ರೂಪೇಶ್ ಮಾತ್ರ ಹೋಗಿಲ್ಲ. ಈ ರೀತಿ ಮಾಡಬೇಡಿ ಎಂದು ಸಾನ್ಯಾ ಕೇಳಿಕೊಂಡರು ರೂಪೇಶ್ ಮಾತ್ರ ಸೈಲೆಂಟ್ ಆಗಿದ್ದಾರೆ. ಸುದೀಪ್ ರ ಎಚ್ಚರಿಕೆಯ ಮಾತುಗಳಿಂದ ರೂಪೇಶ್ ಸಾನ್ಯಾರಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ.
