ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
‘ರುದ್ರಪ್ಪ’ ಟೈಟಲ್ ಸೂಚಿಸಿ ಇಪ್ಪತೊಂದು ಸಾವಿರ ಬಹುಮಾನ ಪಡೆದ ಪ್ರೇಕ್ಷಕ
ಇದೀಗ ಚಿತ್ರತಂಡ ಪ್ರೇಕ್ಷಕರು ನೀಡಿದ ಹೆಸರನ್ನೆ ಫೈನಲ್ ಮಾಡಿದ್ದಾರೆ. ಬೆಂಗಳೂರಿನ ಸುರೇಶ್ ಎಂಬುವರು ನೀಡಿದ. ’ರುದ್ರಪ್ಪ’ ಎಂಬ ಟೈಟಲ್ ಅನ್ನು ಚಿತ್ರತಂಡ ಆಯ್ಕೆ ಮಾಡಿದೆ. ಜೊತೆಗೆ ಸೂಕ್ತ ಟೈಟಲ್ ನೀಡಿದ ಸುರೇಶ್ ಅವರಿಗೆ ಇಪ್ಪತ್ತೊಂದು ಸಾವಿರ ಬಹುಮಾನ ನೀಡಲಾಗಿದೆ.
ರುದ್ರಪ್ಪ ಚಿತ್ರದಲ್ಲಿ ರಮೇಶ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಮೇಶ್ ಗೆ ಇದು ಎರಡನೇ ಸಿನಿಮಾ. ಹೇಮಂತ್ ನಿರ್ದೇಶನದಲ್ಲಿ ಭರತ್.ಹೆಚ್.ಎಸ್ ಸಂಗೀತ ಮತ್ತು ಸುಧೀರ್ ಛಾಯಾಗ್ರಹಣ ಇರಲಿದೆ. ನಾಯಕಿ, ಮಿಕ್ಕಂತೆ ಕಲಾವಿದರುಗಳನ್ನು ಅಡಿಷನ್ ಮೂಲಕ ಆಯ್ಕೆ ಮಾಡಲಿದ್ದು ಸದ್ಯದಲ್ಲೇ ಎಲ್ಲವೂ ಅಂತಿಮಗೊಳ್ಳಲಿದೆ. ಇನ್ನರೆಡು ತಿಂಗಳಲ್ಲಿ ಶೂಟಿಂಗ್ ಪ್ರಾರಂಭಿಸಲು ತಂಡು ಮುಂದಾಗಿದೆ.
