• January 1, 2026

ಹರ್ ಘರ್ ತಿರಂಗಾ ಅಭಿಯಾನಕ್ಕೆ ಸಾಥ್ ನೀಡಿದ ಯಶ್: ಸ್ವಾತಂತ್ರ್ಯ ದಿನಾಚರಣೆಗೆ ಶುಭ ಕೋರಿದ ರಾಕಿಂಗ್ ಕುಟುಂಬ

ದೇಶದಾದ್ಯಂತ ಇಂದು 75ನೇ ಸ್ವಾತಂತ್ರ್ಯೋತದ ಸಂಭ್ರಮ ಮನೆ ಮಾಡಿದೆ. ಈ ಅಮೃತಮಹೋತ್ಸವ ಸಂದರ್ಭದಲ್ಲಿ ಹರ್ ಘರ್ ತಿರಂಗಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಕರೆಕೊಟ್ಟಿರುವ ಹರ್ ಘರ್ ತಿರಂಗಾ ಅಭಿಯಾನಕ್ಕೆ ದೇಶದ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ತಾರೆಯರು ಕೂಡ ಸಾಥ್ ನೀಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಹರ್ ಘರ್ ತಿರಂಗಾ ಅಭಿಯಾನಕ್ಕೆ ಸಾಥ್ ನೀಡಿದ್ದಾರೆ. ಯಶ್ ಮನೆಯಲ್ಲೂ ರಾಷ್ಟ್ರಧ್ವಜ ಹಾರಾಡಿದೆ. ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಯಶ್ ಕುಟುಂಬ ದೇಶದ ಜನತೆಗೆ ಶುಭ ಹಾರೈಸಿದೆ. ರಾಷ್ಟ್ರಧ್ವಜವನ್ನು ಕೈಯಲ್ಲಿ ಹಿಡಿದು ಯಶ್ ಜೊತೆಗೆ ಪತ್ನಿ ರಾಧಿಕಾ ಪಂಡಿತ್ ಮಕ್ಕಳಾದ ಐರಾ ಮತ್ತು ಯಥರ್ವ್ ದೇಶಕ್ಕೆ ಗೌರವ ಸಲ್ಲಿಸಿದ್ದಾರೆ. ಸದ್ಯ ಈ ಪೋಟೋವನ್ನು ಯಶ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ಹಂಚಿಕೊಂಡಿರುವ ಯಶ್ ಪಸರಿಸಲಿ ವಿಶ್ವಕ್ಕೆಲ್ಲಾ ಭಾರತದ ತ್ರಿವರ್ಣ ಧ್ವಜದ ಹಿರಿಮೆ ಎಂದಿದ್ದಾರೆ. ‘ಪಸರಿಸಲಿ ವಿಶ್ವಕ್ಕೆಲ್ಲಾ ಭಾರತದ ತ್ರಿವರ್ಣ ಧ್ವಜದ ಹಿರಿಮೆ. ಪ್ರತಿಯೊಬ್ಬ ಭಾರತೀಯ ಹೆಮ್ಮೆಯಿಂದ ಹೇಳುವ ‘ಜೈ ಹಿಂದ್’ ಎಲ್ಲರಿಗೂ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಶುಭಾಶಯಗಳು’ ಎಂದು ಬರೆದುಕೊಂಡಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now