• March 16, 2026

ಕಾಂತಾರ ಚಿತ್ರೀಕರಣಕ್ಕೂ ಮುನ್ನ ಧರ್ಮಸ್ಥಳಕ್ಕೆ ಭೇಟಿ ನೀಡಿದ ರಿಷಬ್ ಶೆಟ್ಟಿ: ಅಷ್ಟಕ್ಕೂ ಧರ್ಮಾಧಿಕಾರಿಗಳು ಏನ್ ಹೇಳಿದ್ರು ಗೊತ್ತಾ?

ಸದ್ಯ ಎಲ್ಲಿ ನೋಡಿದ್ರು ಕಾಂತಾರ ಸಿನಿಮಾದ್ದೇ ಮಾತು. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಸಿನಿಮಾಕ್ಕೆ ದೇಶ, ವಿದೇಶದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕರಾವಳಿಯ ಭೂತ ಕೋಲ ಹಾಗೂ ನೃತ್ಯದ ಕುರಿತಾದ ಕಾಂತಾರ ಸಿನಿಮಾವ ವಿದೇಶದಲ್ಲೂ ಸದ್ದು ಮಾಡುತ್ತಿದ್ದೆ. ಈಗಾಗ್ಲೆ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದೆ ಕಾಂತಾರ. ಈ ಮಧ್ಯೆ ಕಾಂತಾರ ಸಿನಿಮಾದ ಹೊಸ ಹೊಸ ಇಂಟ್ರೆಸ್ಟಿಂಗ್ ಮಾಹಿತಿಗಳು ಹೊರ ಬೀಳುತ್ತಿದೆ. ಕಾಂತಾರ ದೈವ, ನಾಡು, ನುಡಿ ಆಚರಣೆಯನ್ನು ಒಳಗೊಂಡದ್ದು ಗ್ರಾಮೀಣ ಸೊಗಡಿನ ಹಿನ್ನೆಲೆಯಲ್ಲಿ ಚಿತ್ರೀಕರಿಸಲಾಗಿದೆ. ಈ ಹಿಂದೆ ಶೂಟಿಂಗ್ ಮಾಡುವ ಸಂದರ್ಭದಲ್ಲಿ ದೈವದ ಅನುಭವವಾಗಿತ್ತು ಎಂದು ಹೇಳಲಾಗಿತ್ತು. ಇದೀಗ ರಿಷಬ್ ಶೆಟ್ಟಿ ಶೂಟಿಂಗ್ ಗೂ ಮುನ್ನ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದ ಬಂದಿದ್ದರಂತೆ.  ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಪಾತ್ರಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರಕ್ಕೆ ಯಾವುದೇ ಲೋಪ ಬರಬಾರದು ಎಂಬ ಕಾರಣಕ್ಕೆ ಮಂಗಳೂರಿನ ಸುತ್ತಮುತ್ತಲಿನ ದೈವ ನರ್ತಕರು, ದೈವಾರದಕರನ್ನು ಕೇಳಿ ಅದರ ಬಗ್ಗೆ ತಿಳಿದುಕೊಂಡಿದ್ದಾರೆ. ಈ ವೇಳೆ ದೈವ ನರ್ತಕರು ಧರ್ಮಸ್ಥಳದ ಮಂಜುನಾಥನ ಆಶೀರ್ವಾದ ಪಡೆಯಲು ತಿಳಿಸಿದ್ದಾರೆ. ಇದರ ಮೂಲ ದೇವರು ಧರ್ಮಸ್ಥಳದಲ್ಲಿದ್ದ ಕಾರಣ ಅಲ್ಲಿಗೆ ತೆರಳಲು ಸೂಚಿಸಿದ್ದಾರೆ. ಧರ್ಮಸ್ಥಳಕ್ಕೆ ಭೇಟಿ ನೀಡಿದ ರಿಷಬ್ ಶೆಟ್ಟಿ ದೇವರ ಆಶೀರ್ವಾದ ಪಡೆದು ಬಳಿಕ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದ್ದಾರೆ. ವೀರೇಂದ್ರ ಹೆಗ್ಗಡೆ ಅವರ ಬಳಿಕ ಕಾಂತಾರ ಸಿನಿಮಾದ ಬಗ್ಗೆ ಹೇಳಿ ಯಾವ ರೀತಿ ನಡೆದುಕೊಳ್ಳಬೇಕು ಎಂದು ಕೇಳಿದ್ದಾರೆ. ಈ ವೇಳೆ ಪ್ರತಿಕ್ರಿಯಿಸದ ಹೆಗ್ಗಡೆ ಅವರ ಏನೂ ಆಗಲ್ಲ, ಇಲ್ಲಿಗೆ ಬಂದಿದ್ದೀಯಲ್ಲ ಒಳ್ಳೆಯದಾಗುತ್ತೆ ಹೋಗು ಎಂದಿದ್ದರಂತೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now