ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ವಿಯೇಟ್ನಾಂನಲ್ಲೂ ಕಮಾಲ್ ಮಾಡಲಿದೆ ಕಾಂತಾರ
ಕಾಂತಾರ ಸಿನಿಮಾವನ್ನು ನೋಡಿ ಪರಭಾಷೆಯ ಮಂದಿ ಕ್ಲೀನ್ ಬೋಲ್ಡ್ ಆಗಿದ್ದಾರೆ. ಕನ್ನಡದ ಜೊತೆಗೆ ಇತರ ಭಾಷೆಯ ಸ್ಟಾರ್ ಕಲಾವಿದರು ಕಾಂತಾರಕ್ಕೆ ಜೈ ಅಂದಿದ್ದಾರೆ, ಇದೀಗ ಹೊರದೇಶದಲ್ಲಿ ನೆಲೆಸಿರುವ ಕನ್ನಡಿಗರು ಸಿನಿಮಾ ನೋಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನ.1ರಂದು ವಿಯೆಟ್ನಾಂನ ಹೋ ಚಿ ಮಿನ್ಹ್ ಸಿಟಿಯಲ್ಲಿ ಪ್ರೇಕ್ಷಕರಿಗೆ ಕಾಂತಾರ ಸಿನಿಮಾದ ಪ್ರದರ್ಶನ ಆಯೋಜಿಸಲಾಗಿದೆ.
ಪರಭಾಷೆಯಲ್ಲೂ ಸದ್ದು ಮಾಡುತ್ತಿರುವ ಕಾಂತಾರ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಅಲ್ಲದೆ ಟಾಪ್ 250 ಸಿನಿಮಾಗಳ ಪಟ್ಟಿಯಲ್ಲೂ ಕಾಂತಾರ ಮೊದಲ ಸ್ಥಾನ ಪಡೆದುಕೊಂಡಿದೆ.
