ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ನಟ ಸೂರ್ಯ, ನಿರ್ದೇಶಕ ಜ್ಞಾನವೇಲ್ ವಿರುದ್ಧ ದಾಖಲಾದ FIR ರದ್ದು
ಜೈಭೀಮ್ ಸಿನಿಮಾದಲ್ಲಿ ಮಣ್ಣಿಯಾರ್ ಸಮುದಾಯದ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ ಚೆನ್ನೈ ಮೂಲದ ವಕೀಲ ಕೆ.ಸಂತೋಷ್ ಎಂಬುವವರು ಮೆಟ್ರೋಪಾಲಿಯನ್ ಮ್ಯಾಜಿಸ್ಟ್ರೇಟ್ ಮೆಟ್ಟಿಲೇರಿದ್ದರು. ಬಳಿಕ ಸೂರ್ಯ ಹಾಗೂ ಜ್ಞಾನವೇಲ್ ರಾಜು ಅರ್ಜಿ ಸಲ್ಲಿಸಿದ್ದು, ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ಸಂತೋಷ್ ಕುಮಾರ್ ಈ ತೀರ್ಪು ಪ್ರಕಟಿಸಿದ್ದಾರೆ.
ನಟ ಸೂರ್ಯ ಮತ್ತು ನಿರ್ದೇಶಕ ಜ್ಞಾನವೇಲ್ ರಾಜ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ನ್ಯಾಯಾಲಯ ಮೇ 6 ರಂದು ಆದೇಶ ಹೊರಡಿಸಿತ್ತು. ಬಳಿಕ ವೆಲಾಚೇರಿ ಪೊಲೀಸರು ಮೇ 17 ರಂದು ಸೂರ್ಯ ಮತ್ತು ಜ್ಞಾನವೇಲ್ ರಾಜ ವಿರುದ್ಧ ಎಫ್ ಐಆರ್ ದಾಖಲಿಸಿದ್ದರು.
