ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಕಜ್ಬ ಬಳಿಕ ಆರ್ ಚಂದ್ರುಗೆ ಸಖತ್ ಡಿಮ್ಯಾಂಡ್: ಪರಭಾಷೆಯಿಂದಲೂ ಬರ್ತಿದೆ ಆಫರ್
ಕೆಜಿಎಫ್ ಸಿನಿಮಾಗೆ ಕಬ್ಜ ಸಿನಿಮಾವನ್ನು ಹೋಲಿಕೆ ಮಾಡಿ ಮಾತನಾಡುತ್ತಿದೆ. ಇದು ಚಿತ್ರತಂಡಕ್ಕೆ ಮತ್ತಷ್ಟು ಬಲ ತಂದುಕೊಟ್ಟಿದ್ದು ಟೀಸರ್ ನಲ್ಲಿ ಚಿತ್ರತಂಡ ಗೆಲವು ಸಂಭ್ರಮಿಸುತ್ತಿದೆ. ಕಬ್ಜ ಹಾಲಿವುಡ್ ಗುಣ ಮಟ್ಟದಲ್ಲಿ ತಯಾರಾದ ಸಿನಿಮಾವಾಗಿದ್ದು ರಿಲೀಸ್ ಆದ ಬಳಿಕ ತನ್ನದೇ ಆದ ಹೆಗ್ಗುರುತು ಸೃಷ್ಟಿಸಲಿದೆ ಎನ್ನಲಾಗುತ್ತಿದೆ.
ಟೀಸರ್ ಮೂಲಕ ಸಿನಿ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಕಬ್ಜಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ತೆಲುಗು ಹಾಗೂ ತಮಿಳು ಡಿಸ್ಟ್ರಿಬ್ಯೂಟರ್ ಗಳು ಕಜ್ಬ ಡಿಸ್ಟ್ರಿಬ್ಯೂಷನ್ ಹಕ್ಕಿಗಾಗಿ ಮುಗಿಬಿದಿದ್ದಾರೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಕಬ್ಜ ಒಂದು ಹಾಡಿನ ಚಿತ್ರೀಕರಣ ಬಾಕಿ ಉಳಿಸಿಕೊಂಡಿದೆ.
ಚಿತ್ರವು ಸಾಕಷ್ಟು ವಿಎಫ್ಎಕ್ಸ್ ಕೆಲಸಗಳನ್ನು ಹೊಂದಿದೆ, 7 ಭಾಷೆಗಳಲ್ಲಿ ಡಬ್ ಮಾಡಬೇಕಾಗಿದೆ. ಸದ್ಯ ನಿರ್ದೇಶಕ ಚಂದ್ರು ಉಪೇಂದ್ರ ಜೊತೆಗೆ ಸಿನಿಮದ ಪ್ರಚಾರಕ್ಕಾಗಿ ದುಬೈಗೆ ಹೋಗುತ್ತಿರುವ.ಕಬ್ಜ ಮೇಲೆ ಪ್ರೇಕ್ಷಕರ ನಿರೀಕ್ಷೆ ಹೆಚ್ಚಾಗಿರೋದ್ರಿಂದ ಬಿಡುಗಡೆಯ ದಿನಾಂಕವನ್ನು ಇನ್ನೂ ನಿಗದಿ ಮಾಡಿಲ್ಲ
ಕಬ್ಜ ಟೀಸರ್ ರಿಲೀಸ್ ಆಗುತ್ತಿದ್ದಂತೆ ಆರ್ ಚಂದ್ರುಗೆ ಸಖತ್ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಚಂದ್ರು ಜೊತೆ ಸಿನಿಮಾ ಮಾಡ್ಬೇಕು ಅಂತ ಪರಭಾಷೆಯ ಸ್ಟಾರ್ಸ್ ನಿರ್ಧರಿಸಿದ್ದಾರಂತೆ.ಜೊತೆಗೆ ಟೀಸರ್ ನೋಡಿ ಮೆಚ್ಚಿಕೊಂಡು ಚಂದ್ರುಗೆ ಕರೆ ಮಾಡಿ ಶುಭ ಹಾರೈಸಿದ್ದಾರೆ. ಜೊತೆಗೆ ತಮಿಳಿನ ಸೂಪರ್ ಸ್ಟಾರ್ ಒಬ್ಬರು ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ ಅಂತ ಆಫರ್ ನೀಡಿದ್ದಾರಂತೆ.
