• March 14, 2026

ಅಪ್ಪು ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಉಪೇಂದ್ರ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೋಟ್ಯಾಂತರ ಅಭಿಮಾನಿಗಳ ಆರಾಧ್ಯ ದೈವ. ಪುನೀತ್ ನಿಧನರಾಗಿ ಒಂದು ವರ್ಷವಾಗುತ್ತ ಬಂದರು ಇಂದಿಗೂ ಅವರ ಅಭಿಮಾನಿಗಳು ನಿತ್ಯ ಅಪ್ಪು ಜಪ ಮಾಡ್ತಿದ್ದಾರೆ. ಕೇವಲ ಅಭಿಮಾನಿಗಳು ಮಾತ್ರವಲ್ಲ ಸ್ಟಾರ್ ನಟ, ನಟಿಯರು ಕೂಡ ಪುನೀತ್ ರನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ. ಸಿನಿಮಾಗಳ ಜೊತೆಗೆ ಸಾಮಾಜಿಕ ಕೆಲಸಗಳ ಮೂಲಕವೂ ಅಭಿಮಾನಿಗಳ ಮನ ಗೆದ್ದವ್ರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಸದ್ಯ ಸಾಕಷ್ಟು ಮಂದಿ ಅಪ್ಪು ಅವರ ಗುಣಗಳನ್ನು ಅಳವಡಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಇದೀಗ ರಿಯಲ್ ಸ್ಟಾರ್ ಉಪೇಂದ್ರ ಕೂಡ ಅಪ್ಪು ಗುಣಗಳನ್ನು ಅಳವಡಿಸಿಕೊಳ್ಳುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಸದ್ಯ ಉಪೇಂದ್ರ ಐಯು ಸಿನಿಮಾದ ಶೂಟಿಂಗ್ ನಲ್ಲಿ ತೊಡಗಿಕೊಂಡಿದ್ದಾರೆ. ಈ ಸಿನಿಮಾದ ಶೂಟಿಂಗ್ ಗಾಗಿ ಉಪ್ಪಿ ಹೊಸಪೇಟೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಅಪ್ಪು ಅವರಿಗೆ ಗೌರವ ಕೊಡುವುದರ ಜೊತೆಗೆ ಅವರ ಗುಣಗಳನ್ನು ಅಳವಡಿಸಿಕೊಳ್ಳುವಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಹೊಸಪೇಟೆಯ ಡಾ.ಪುನೀತ್ ರಾಜ್ ಕುಮಾರ್ ವೃತ್ತದಲ್ಲಿರುವ ಪುನೀತ್ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ಉಪೇಂದ್ರ ನಮನ ಸಲ್ಲಿಸಿದರು. ಅಪ್ಪು ಅವರ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜೀವನದಲ್ಲಿ ಅಪ್ಪು ಥರ ಬದುಕಬೇಕು. ಅಪ್ಪು ಪುತ್ಥಳಿ ಮಾಡಿದ್ದಾರೆ ಅಂತ, ಹೂವಿನ ಹಾರ ಹಾಕಿ ಮನೆಗೆ ಹೋಗೋದಲ್ಲಾ. ಅವರ ಗುಣಗಳನ್ನು ನೀವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಯಾರು ಕೈ ಬಿಟ್ರು ಹೊಸಪೇಟೆ ಜನ ಕೈ ಬಿಡೋಲ್ಲಾ ಅಂತಾ ಅಪ್ಪು ಹೇಳಿದ್ದರು. ಇನ್ನೂ ರಾಜಕೀಯ ಮಾಡಬೇಡಿ, ಪ್ರಜಾಕೀಯ ಮಾಡಿ. ಪಕ್ಷ ನೋಡಿ ಓಟ್ ಹಾಕಬೇಡಿ, ಸಿದ್ದಾಂತ ನೋಡಿ ಓಟ್ ಹಾಕಿ ಎಂದು ಅಭಿಮಾನಿಗಳಿಗೆ ಉಪೇಂದ್ರ ಹೇಳಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now