ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಪತ್ನಿ ಮಹಾಲಕ್ಷ್ಮೀಗಾಗಿ ಡೆಲಿವರಿ ಬಾಯ್ ಆದ ನಿರ್ಮಾಪಕ ರವೀಂದರ್ ಚಂದ್ರಶೇಖರ್r
ಮಹಾಲಕ್ಷ್ಮೀ ಅವರನ್ನು ಮದುವೆಯಾದ ಬಳಿಕ ರವೀಂದರ್ ಚಂದ್ರಶೇಖರ್ ಸೋಷಿಯಲ್ ಮೀಡಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ತಾವು ಅನುಭವಿಸುತ್ತಿರುವ ಮಧುರ ಕ್ಷಣಗಳನ್ನು ರವೀಂದರ್ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಮಹಾಲಕ್ಷ್ಮಿ ಅವರನ್ನು ಮದುವೆಯಾದ ಬಳಿಕ ತಮ್ಮ ಜೀವನದಲ್ಲಿ ಆದ ಬದಲಾವಣೆಯನ್ನು ರವೀಂದರ್ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಮದುವೆಯ ಬಳಿಕ ರವೀಂದರ್ ಪತ್ನಿಯೊಂದಿಗೆ ಮನೆ ದೇವರ ದರ್ಶನ ಮಾಡಿ ಬಂದಿದ್ದಾರೆ. ಅಲ್ಲದೆ ಪ್ರೈವೆಟ್ ಜೆಟ್ ನಲ್ಲಿ ಮಹಾಲಕ್ಷ್ಮಿ ಅವರನ್ನು ರೆಸಾರ್ಟ್ ಗೆ ಕರೆದುಕೊಂಡು ಹೋಗಿ ಬಂದಿದ್ದಾರೆ. ಮದುವೆಯಾದ ಬಳಿಕ ಪತ್ನಿಯೊಂದಿಗೆ ಹೆಚ್ಚು ಸಮಯ ಕಳೆಯುತ್ತಿರುವ ರವೀಂದರ್ ಅವುಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುತ್ತಿದ್ದಾರೆ.ಅಂತೆಯೇ ಇಂದು ತಮಾಷೆಯ ಸಂಗತಿಯೊಂದನ್ನು ರವೀಂದರ್ ಸಾಮಾಜಿಕ ಜಾಲಾ ತಾಣದಲ್ಲಿ ಹಂಚಿಕೊಂಡಿದ್ದಾರೆ.
ಮಹಾಲಕ್ಷ್ಮಿ ಈ ಭಾನುವಾರದಂದು ಶೂಟಿಂಗ್ ಗಾಗಿ ತೆರಳಿದ್ದರಂತೆ. ಅಲ್ಲದೇ ತನಗೆ ಏನೆಲ್ಲಾ ಊಟ ಬೇಕು ಎಂದು ಹೇಳಿ ಹೋಗಿದ್ದರಂತೆ. ಊಟ ಆರ್ಡರ್ ಮಾಡಿ ಕಳುಹಿಸಬಹುದಿತ್ತು. ಆದರೆ, ನಾನೇ ಶೂಟಿಂಗ್ ಸ್ಪಾಟ್ ಗೆ ಅಡುಗೆ ತಗೆದುಕೊಂಡು ಹೋಗಿದ್ದೆ. ಅದೊಂದು ರೀತಿಯಲ್ಲಿ ಅನುಭವ ವಿಭಿನ್ನವಾಗಿತ್ತು. ಭಾನುವಾರದಂದು ಸಾಮಾನ್ಯವಾಗಿ ನಾನ್ ವೆಜ್ ಇರತ್ತೆ. ನನ್ನ ತಾಯಿ ಹೆಂಡತಿಗಾಗಿ ವೆಜ್ ಮಾಡಿದ್ದಳು ಎಂದು ಬರೆದುಕೊಂಡಿದ್ದಾರೆ.
ಊಟ ತೆಗೆದುಕೊಂಡು ಹೋದ ಬಟ್ಟಲು, ಡಬ್ಬಿಗಳನ್ನು ವಾಪಸ್ಸು ತರುವಂತೆ ಹೆಂಡತಿಗೆ ಕೇಳಿಕೊಂಡಿದ್ದಾರೆ. ಅವುಗಳಿಗಾಗಿ ಅತ್ತೆ ಕಾಯುತ್ತಿರುತ್ತಾರೆ. ಯಾವುದೇ ಕಾರಣಕ್ಕೂ ಮಿಸ್ ಮಾಡದೇ ಎಲ್ಲವನ್ನೂ ತಗೆದುಕೊಂಡು ಬಾ ಎಂದು ಸೋಷಿಯಲ್ ಮೀಡಿಯಾ ಮೂಲಕವೇ ಹೆಂಡತಿಗೆ ಹೇಳಿದ್ದಾರೆ. ಹೀಗಾಗಿ ಹೆಂಡತಿಗಾಗಿ ಈ ಭಾನುವಾರ ಫುಡ್ ಡೆಲಿವರಿ ಬಾಯ್ ಆದ ಅನುಭವನ್ನು ರವೀಂದರ್ ಇನ್ಸ್ಟಾದಲ್ಲಿ ಬರೆದುಕೊಂಡಿದ್ದಾರೆ.
