ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಸ್ಟಾರ್ ನಟನ ಸಿನಿಮಾದಿಂದ ರಶ್ಮಿಕಾ ಔಟ್: ಮಾಳವಿಕ ಮೋಹನ್ ಎಂಟ್ರಿ
ಸದ್ಯದ ಮಾಹಿತಿ ಪ್ರಕಾರ ಈ ಸಿನಿಮಾದಿಂದ ರಶ್ಮಿಕಾರನ್ನು ಕೈ ಬಿಡಲಾಗದ್ದು ರಶ್ಮಿಕಾ ಜಾಗಕ್ಕೆ ಬೇರೆ ನಟಿಯನ್ನು ಕರೆತಂದಿದೆ ಚಿತ್ರತಂಡ. ಕೆಜಿಎಫ್ ಕತೆಯುಳ್ಳ ಈ ಸಿನಿಮಾ ಚಿಯಾನ್ ವಿಕ್ರಂ ನಟನೆಯ 69ನೇ ಸಿನಿಮಾ ಆಗಿದ್ದು, ಸಿನಿಮಾದ ಚಿತ್ರೀಕರಣ ಈಗಾಗಲೇ ಆರಂಭವಾಗಿದೆ. ರಶ್ಮಿಕಾ ನಟನೆಯನ್ನು ಮೆಚ್ಚಿಕೊಂಡು ಈ ಚಿತ್ರದಲ್ಲಿ ನಟಿಸಲು ರಶ್ಮಿಕಾಗೆ ಅವಕಾಶ ನೀಡಲಾಗಿತ್ತು. ಆದರೆ ಅನಿವಾರ್ಯ ಕಾರಣಗಳಿಂದಾಗಿ ಇದೀಗ ರಶ್ಮಿಕಾರನ್ನು ಚಿತ್ರತಂಡ ಕೈ ಬಿಟ್ಟಿದೆ.
ಸದ್ಯ ರಶ್ಮಿಕಾ ಜಾಗಕ್ಕೆ ನಟಿ ಮಾಳವಿಕಾ ಮೋಹನ್ ಗೆ ಅವಕಾಶ ನೀಡಲಾಗಿದೆ. ಈಗಾಗ್ಲೆ ಮಾಳವಿಕಾ ಮೋಹನ್ ರಜನೀಕಾಂತ್ ನಟನೆಯ ಪೆಟ್ಟಾ, ವಿಜಯ್ ಜೊತೆ ಮಾಸ್ಟರ್ ಹಾಗೂ ಧನುಷ್ ನಟನೆಯ ಮಾರನ್ ಸಿನಿಮಾದಲ್ಲಿ ಮಾಳವಿಕಾ ಮೋಹನ್ ಬಣ್ಣ ಹಚ್ಚಿದ್ದಾರೆ. ಇದರ ಜೊತೆಗೆ ಕನ್ನಡದಲ್ಲಿ ನಾನು ಮತ್ತು ವರಲಕ್ಷ್ಮೀ ಸಿನಿಮಾದಲ್ಲೂ ಮಾಳವಿಕ ನಟಿಸಿದ್ದರು, ಇದೀಗ ಚಿಯಾನ್ ವಿಕ್ರಂಗೆ ಜೋಡಿಯಾಗಿದ್ದಾರೆ.
