• January 2, 2026

ಹೊಸ ಪ್ರಾಜೆಕ್ಟ್ ಘೋಷಿಸಿದ ನಟಿ ರಶ್ಮಿಕಾ ಮಂದಣ್ಣ: ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿದ ಪೋಸ್ಟರ್

ಕಿರಿಕ್ ಪಾರ್ಟಿ ಬೆಡಗಿ ನಟಿ ರಶ್ಮಿಕಾ ಮಂದಣ್ಣ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದ ಬಳಿಕ ತೆಲುಗಿನಲ್ಲಿ ಸದ್ದು ಮಾಡಿದ್ದ ನಟಿ ಇದೀಗ ಬಿಟೌನ್ ನಲ್ಲೂ ಸಖತ್ ಬ್ಯುಸಿಯಾಗಿದ್ದಾರೆ. ರಶ್ಮಿಕಾ ನಟನೆಯ ಸಾಲು ಸಾಲು ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿದ್ದು ಈ ಮಧ್ಯೆ ಹೊಸ ಪ್ರಾಜೆಕ್ಟ್ ಒಂದನ್ನು ರಶ್ಮಿಕಾ ಘೋಷಿಸಿದ್ದಾರೆ. ಪುಷ್ಪ ಸಿನಿಮಾದ ಬಳಿಕ ರಶ್ಮಿಕಾಗೆ ಡಿಮ್ಯಾಂಡ್ ಜಾಸ್ತಿಯಾಗಿದೆ. ಬಾಲಿವುಡ್ ಸ್ಟಾರ್ ನಟರ ಜೊತೆ ಕೊಡಗಿನ ಬೆಡಗಿ ಸ್ಕ್ರೀನ್ ಶೇರ್ ಮಾಡ್ತಿದ್ದಾರೆ. ರಶ್ಮಿಕಾ ನಟನೆಯ ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿ ನಿಂತಿವೆ. ಇದೀಗ ಹೊಸ ಪ್ರೊಜೆಕ್ಟ್ ಘೋಷಣೆ ಮಾಡಿದ್ದು `ಮೆಗಾ ಬ್ಲ್ಯಾಕ್ ಬಸ್ಟರ್’ ಪ್ರಾಜೆಕ್ಟ್ ಟೈಟಲ್ ಜತೆ ಸೆಪ್ಟೆಂಬರ್ 4ಕ್ಕೆ ಟ್ರೈಲರ್ ರಿಲೀಸ್ ಮಾಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. ರಶ್ಮಿಕಾ ಮಾತ್ರವಲ್ಲದೆ ಮೆಗಾ ಬ್ಲ್ಯಾಕ್ ಬಾಸ್ಟರ್ ಪೋಸ್ಟರ್ ಅನ್ನು ತ್ರೀಷಾ ಕೃಷ್ಣ, ನಟ ಕಾರ್ತಿ, ಕಪಿಲ್ ಶರ್ಮಾ, ಸೌರವ್‌ ಗಂಗೂಲಿ, ದೀಪಿಕಾ ಪಡುಕೋಣೆ ಹೀಗೆ ಹಲವರು ಶೇರ್ ಮಾಡಿದ್ದಾರೆ. ಈ ಪ್ರಾಜೆಕ್ಟ್ ಕುರಿತು ಅಭಿಮಾನಿಗಳಲ್ಲಿ ಕ್ಯೂರಿಯಾಸಿಟಿ ಕ್ರಿಯೇಟ್ ಆಗಿದೆ.ಇದು ಜಾಹೀರಾತಿನ ಪೋಸ್ಟರ್ ಎಂದು ಕೂಡ ಹೇಳಲಾಗುತ್ತಿದೆ. ಒಟ್ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಯಾವ ಗುಡ್ ನ್ಯೂಸ್ ಕೊಡ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now