• January 2, 2026

ರಣಬೀರ್ ಕಪೂರ್ ನಟನೆಯ ಸಿನಿಮಾ ಸೆಟ್ ಗೆ ಬೆಂಕಿ

ರಣಬೀರ್ ಕಪೂರ್ ಹಾಗೂ ಶ್ರದ್ದಾ ಕಪೂರ್ ನಟನೆಯ ಹೊಸ ಸಿನಿಮಾದ ಸೆಟ್ ಗೆ ಬೆಂಕಿ ತಗುಲಿದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸದ್ಯ ರಣಬೀರ್ ರಶ್ಮಿಕಾ ಮಂದಣ್ಣ ನಟನೆಯ ‘ಅನಿಮಲ್’ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಬಳಿಕ ಮುಂದಿನ ವಾರದಿಂದ ಶ್ರದ್ದಾ ಕಪೂರ್ ನಟನೆಯ ಹೊಸ ಸಿನಿಮಾದಲ್ಲಿ ಪಾಲ್ಗೊಳ್ಳಲಿದ್ದಾರೆ. ಹೀಗಾಗಿ ಸಿನಿಮಾದ ಶೂಟಿಂಗ್ ಗಾಗಿ ಸೆಟ್ ಹಾಕಲಾಗಿತ್ತು. ಲವ್ ರಂಜನ್ ನಿರ್ದೇಶನದ ಇನ್ನೂ ಹೆಸರಿಡದ ಸಿನಿಮಾದಲ್ಲಿ ರಣಬೀರ್ ಹಾಗೂ ಶ್ರದ್ಧಾ ನಟಿಸುತ್ತಿದ್ದಾರೆ. ಈ ಸಿನಿಮಾಗಾಗಿ ಮುಂಬೈನ ಅಂಧೇರಿ ವೆಸ್ಟ್ ನಲ್ಲಿರುವ ಲಿಂಕ್ ರೋಡ್ ಸಮೀಪದ ಚಿತ್ರಕೂಡ ಸ್ಟುಡಿಯೋಸ್ ನಲ್ಲಿ ಹಾಡಿನ ಚಿತ್ರೀಕಣ ಒಂದಕ್ಕೆ ಅದ್ದೂರಿ ಸೆಟ್ ಹಾಕಲಾಗಿತ್ತು. ಆದರೆ ಅಚಾನಕ್ಕಾಗಿ ಸೆಟ್ ಗೆ ಬೆಂಕಿ ತಗುಲಿದೆ. ಸೆಟ್ ನಿರ್ಮಾಣ ಬಹುತೇಕ ಮುಗಿದ್ದಿದ್ದರಿಂದ ಸೆಟ್ ನಲ್ಲಿ ಯಾರು ಇರಲಿಲ್ಲ. ಹೀಗಾಗಿ ಯಾವುದೇ ಸಾವು- ನೋವು ಸಂಭವಿಸಿಲ್ಲ. ನಿನ್ನೆ ಸಂಜೆ 4.30ರ ಸುಮಾರಿಗೆ ಸೆಟ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು 1000 ಚದರ ಅಡಿ ಸ್ಥಳವನ್ನು ಬೆಂಕಿ ಶೀಘ್ರವೇ ವ್ಯಾಪಿಸಿಕೊಂಡಿದೆ. 10 ಅಗ್ನಿ ಶಾಮಕ ವಾಹನಗಳು, ಹಲವು ಸಿಬ್ಬಂದಿಗಳು ಅಗ್ನಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಸತತ ಎರಡು ಗಂಟೆಗಳ ಶ್ರಮದಿಂದ ಬೆಂಕಿ ಸಂಪೂರ್ಣವಾಗಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now