ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಇಂದು ಕಬ್ಜ ಟೀಸರ್ ರಿಲೀಸ್: ವಿಶೇಷ ಅತಿಥಿಯಾಗಿ ಆಗಮಿಸಲಿರೋ ರಾಣಾ ದಗ್ಗುಬಾಟಿ
ಈಗಾಗ್ಲೆ ಸ್ವತಃ ನಟ ಕಿಚ್ಚ ಸುದೀಪ್ ಟೀಸರ್ ಕಾದು ಕಾಯ್ತಿರೋದಾಗಿ ತಿಳಿಸಿದ್ದು ಪ್ರತಿಯೊಬ್ಬರು ಟೀಸರ್ ನೋಡಿ ಎಂದು ವಿಡಿಯೋ ಸಂದೇಶದಲ್ಲಿ ಹೇಳಿಕೊಂಡಿದ್ದರು. ಈಗಾಗ್ಲೆ ಕಬ್ಜ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡ್ತಿದೆ.ಕೆಜಿಎಫ್ 2 ಬಳಿಕ ಪರಭಾಷೆಯಲ್ಲೂ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಸಿನಿಮಾ ಅಂದರೆ ಅದು ಕಬ್ಜ.
ಇದೇ ಮೊದಲ ಭಾರಿಗೆ ಉಪೇಂದ್ರ, ಸುದೀಪ್ ಹಾಗೂ ಆರ್ ಚಂದ್ರು ಒಟ್ಟಿಗೆ ಕೆಲಸ ಮಾಡ್ತಿರೋದ್ರಿಂದ ಸಿನಿಮಾದ ಮೇಲೆ ಮತ್ತಷ್ಟು ನಿರೀಕ್ಷೆ ಇದೆ. ಕೆಜಿಎಫ್ ಸಿನಿಮಾದಲ್ಲಿ ಕೆಲಸ ಮಾಡಿದ್ದ ತಾಂತ್ರಿಕ ತಂಡ ಕೂಡ ಕಬ್ಜ ಸಿನಿಮಾದಲ್ಲಿ ಕೆಲಸ ಮಾಡಿದೆ. ಒಟ್ನಲ್ಲಿ ಕಬ್ಜ ಸಿನಿಮಾಗಾಗಿ ಪ್ರತಿಯೊಬ್ಬರು ಕಾದು ಕೂತಿದ್ದಾರೆ.
