• December 22, 2025

ಸೋನಿಯಾ ಗಾಂಧಿ ಪರ ಟ್ವೀಟ್ ಮಾಡಿ ಕುತೂಹಲ ಮೂಡಿಸಿದ ನಟಿ ರಮ್ಯಾ

ಕಳೆದ ಕೆಲ ದಿನಗಳಿಂದ ಸ್ಯಾಂಡಲ್ ವುಡ್ ಮೋಹಕ ತಾರೆ ನಟಿ ರಮ್ಯಾ ನಡೆ ಸಾಕಷ್ಟುಕುತೂಹಲಕ್ಕೆ ಕಾರಣವಾಗಿದೆ. ಸಾಕಷ್ಟು ವರ್ಷಗಳಿಂದ ಸಿನಿಮಾ ರಂಗದಿಂದ ದೂರವಿದ್ದ ರಮ್ಯಾ ಇದೀಗ ತಮ್ಮದೇ ಪ್ರೊಡಕ್ಷನ್ ಹೌಸ್ ಆರಂಭಿಸಿದ್ದಾರೆ. ಜೊತೆಗೆ ಮತ್ತೆ ರಾಜಕೀಯದಲ್ಲಿ ತೊಡಗಿಕೊಳ್ಳುವ ಎಲ್ಲಾಲಕ್ಷಣಗಳು ಕಾಣಿಸುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಖ್ಯಾತಿ ಘಳಿಸಿದ್ದ ರಮ್ಯಾ ಬಳಿಕ ರಾಜಕೀಯ ರಂಗದತ್ತ ಮುಖ ಮಾಡಿದರು. ಆದರೆ ರಮ್ಯಾಗೆ ರಾಜಕೀಯ ಕೈ ಹಿಡಿಯಲಿಲ್ಲ. ಮಂಡ್ಯದಿಂದ ಸೋತ ಬಳಿಕ ರಾಜಕೀಯದಿಂದ ದೂರವಿದ್ದ ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದರು. ಕಳೆದ ಕೆಲ ಸಮಯದಿಂದ ರಮ್ಯಾ ಸಿನಿಮಾದ ಕುರಿತಾಗಿ ಸಾಕಷ್ಟು ಪ್ರತಿಕ್ರಿಯೆ ನೀಡುತ್ತಿದ್ದರು. ಅಲ್ಲದೆ ಇತ್ತೀಚೆಗೆ ಸಿನಿ ಸಂಬಂಧಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡು ಕುತೂಹಲ ಮೂಡಿಸಿದ್ದರು. ಜೊತೆಗೆ ಆ್ಯಪಲ್ ಬಾಕ್ಸ್ ಹೆಸರಿನಲ್ಲಿ ತಮ್ಮದೆ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿ ಸಿನಿಮಾದಲ್ಲಿ ನಟಿಸುವುದಾಗಿ ಹೇಳಿದ್ದರು. ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದಲ್ಲಿ ನಟಿಸುವುದಾಗಿ ಹೇಳಿಕೊಂಡಿದ್ದ ರಮ್ಯಾ ಇದ್ದಕ್ಕಿದ್ದ ಹಾಗೆ ಚಿತ್ರದಿಂದ ಹೊರ ಬಂದಿದ್ದರು. ರಮ್ಯಾ ಜಾಗಕ್ಕೆ ಈಗಾಗ್ಲೆ ಬೇರೆ ನಾಯಕಿಯ ಎಂಟ್ರಿಯಾಗಿದೆ. ರಮ್ಯಾ ಕೇವಲ ನಿರ್ಮಾಪಕಿಯಾಗಿ ಮಾತ್ರ ಉಳಿದುಕೊಂಡಿದ್ದಾರೆ. ಈ ಸಿನಿಮಾದಲ್ಲಿ ನಟಿಸದೇ ಇರುವುದಕ್ಕೆ ಕಾರಣ, ಮತ್ತೆ ರಾಜಕಾರಣದಲ್ಲಿ ರಮ್ಯಾ ಸಕ್ರಿಯರಾಗಲಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೇ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ರಮ್ಯಾ ಪಾಲ್ಗೊಂಡು ಅಚ್ಚರಿ ಮೂಡಿಸಿದ್ದರು. ಇದೀಗ ಸೋನಿಯಾ ಗಾಂಧಿ ಪರ ಬ್ಯಾಟ್ ಬೀಸುವಂತಹ ಟ್ವೀಟ್‌ವೊಂದನ್ನು ರಮ್ಯಾ ಮಾಡಿದ್ದಾರೆ. ಸೋನಿಯಾ ಗಾಂಧಿ ಅವರು ಇಟಲಿಯವರೇ ಆಗಿರಬಹುದು. ಆದರೆ ಸಾಕಷ್ಟು ಭಾರತೀಯರಿಗಿಂತ ಇವರು ನೈಜ ಭಾರತೀಯರಾಗಿದ್ದಾರೆ. ಅದು ಸತ್ಯ’ ಎಂದು ವಿರೋಧಿಗಳಿಗೆ ಟಾಂಗ್ ಕೊಟ್ಟಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now