ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಡಾಲಿ ಧನಂಜಯ್ ಗೆ ಸಾಥ್ ನೀಡಿದ ಮೋಹಕ ತಾರೆ ರಮ್ಯಾ
ಉತ್ತಮ ಗುಣಮಟ್ಟದ ಸಿನಿಮಾಗಳು ಬಂದಾಗ ಅದರ ಬಗ್ಗೆ ರಮ್ಯಾ ಟ್ವೀಟ್ ಮಾಡಿ ಅಭಿಪ್ರಾಯ ತಿಳಿಸುತ್ತಾರೆ. ಬಡವ ರಾಸ್ಕಲ್ ಸಿನಿಮಾದ ಬಳಿಕ ಡಾಲಿ ಹೊಯ್ಸಳ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ವಿಜಯ್ ನಿರ್ದೇಶನದ ಡಾಲಿ ಧನಂಜಯ್ ನಟನೆಯ 25ನೇ ಸಿನಿಮಾವಾಗಿರೋ ಹೊಯ್ಸಳ ಸಿನಿಮಾದಲ್ಲಿ ಧನಂಜಯ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಸದ್ಯ ಚಿತ್ರದ ಚಿತ್ರೀಕರಣ ಭರದಿಂದ ಸಾಗ್ತಿದ್ದು ಶೂಟಿಂಗ್ ಸ್ಥಳಕ್ಕೆ ನಟಿ ರಮ್ಯಾ ಎಂಟ್ರಿಕೊಟ್ಟಿದ್ದು, ಕೆಲ ಹೊತ್ತು ಚಿತ್ರತಂಡದ ಜೊತೆ ಕಾಲ ಕಳೆದಿದ್ದಾರೆ.
ಕಳೆದ ಬಾರಿ ಹೊಯ್ಸಳ ಚಿತ್ರದ ಶೂಟಿಂಗ್ ನಡೆಯುತ್ತಿದ್ದ ಜಾಗಕ್ಕೆ ಟೀಂ ಇಂಡಿಯಾ ಆಟಗಾರ್ತಿ ವೇದ ಕೃಷ್ಣಮೂರ್ತಿ ಭೇಟಿ ನೀಡಿದ್ದರು. ಇದೀಗ ಮೋಹಕ ತಾರೆ ರಮ್ಯಾ ಭೇಟಿ ನೀಡಿದ್ದು ಚಿತ್ರತಂಡಕ್ಕೆ ಮತ್ತಷ್ಟು ಖುಷಿಯಾಗಿದೆ. ರಮ್ಯಾ ಸಿನಿಮಾ ರಂಗಕ್ಕೆ ಕಂಬ್ಯಾಕ್ ಮಾಡುವ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೆ ಹೊಯ್ಸಳ ಚಿತ್ರತಂಡಕ್ಕೆ ಎಂಟ್ರಿಕೊಟ್ಟಿರೋದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.
