ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ರಮ್ಯಾ ನನ್ನ ಮನೆಯಲ್ಲಿಲ್ಲ: ಸ್ಪಷ್ಟನೆ ನೀಡಿದ ನಟ ನರೇಶ್
ರಮ್ಯಾ ಯಾವುದೇ ರೀತಿಯಲ್ಲೂ ನನ್ನನ್ನು ಸಂಪರ್ಕಿಸಿಲ್ಲ. ಕೋರ್ಟ್ ತೀರ್ಪಿಗಾಗಿ ಕಾಯುತ್ತಿದ್ದೇನೆ. ಅಲ್ಲದೆ ಈ ಬಗ್ಗೆ ಇಲ್ಲ ಸಲ್ಲದ ರೂಮರ್ ಗಳನ್ನು ಹಬ್ಬಿಸುತ್ತಿರುವವರ ವಿರುದ್ಧವು ಕ್ರಮ ಕೈಗೊಳ್ಳುವುದಾಗಿ ನರೇಶ್ ಹೇಳಿದ್ದಾರೆ.
ಮೂರನೇ ಪತ್ನಿ ರಮ್ಯಾ ರಘುಪತಿಯಿಂದ ದೂರವಾದ ನರೇಶ್ ಪವಿತ್ರಾ ಲೋಕೇಶ್ ಜೊತೆ ವಾಸವಾಗಿದ್ದಾರೆ ಎನ್ನಲಾಗಿತ್ತು. ಅದಕ್ಕೆ ಪುಷ್ಠ ನೀಡುವಂತೆ ಇಬ್ಬರು ಮೈಸೂರಿನ ಹೋಟೆಲ್ ಒಂದರಲ್ಲಿ ಕಾಣಿಸಿಕೊಂಡಿದ್ದರು. ಆ ಬಳಿಕ ರಮ್ಯಾ ಹಾಗೂ ನರೇಶ್ ಮಧ್ಯೆ ದೊಡ್ಡ ರಾದ್ದಾಂತವಾಗಿತ್ತು. ಅತ್ತ ನರೇಶ್ ಕೋರ್ಟ್ ನಲ್ಲಿ ನೋಡಿಕೊಳ್ಳುತ್ತೇನೆ ಎಂದಿದ್ದರು. ಇತ್ತ ರಮ್ಯಾ ತಾಯಿಯ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ ಕೆಲ ತಿಂಗಳ ಕಾಲ ಸೈಲೆಂಟ್ ಆಗಿದ್ದ ರಮ್ಯಾ ಹಾಗೂ ನರೇಶ್ ಪ್ರಕರಣ ಇದೀಗ ಮತ್ತೆ ಸುದ್ದಿಯಾಗೋಕೆ ಶುರುವಾಗಿದೆ.
