• December 22, 2025

ಕನ್ನಡದ ಪ್ರಸಿದ್ಧ ನಟಿಯರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡ ರಮ್ಯಾ: ನಂ1 ಪಟ್ಟ ಗಿಟ್ಟಿಸಿಕೊಂಡ ಚೆಲುವೆ ಯಾರು ಗೊತ್ತಾ?

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಸಿನಿಮಾ ರಂಗದಿಂದ ದೂರವಾಗಿ ಸಾಕಷ್ಟು ವರ್ಷಗಳೇ ಕಳೆದಿದೆ.ರಾಜಕೀಯ ಹಾಗೂ ಬಣ್ಣದ ಬದುಕಿನಿಂದ ದೂರವಿರೋ ರಮ್ಯಾ ಸಿನಿಮಾ ರಂಗದ ಜೊತೆ ಸಕ್ರಿಯವಾಗಿದ್ದಾರೆ. ಉತ್ತಮ ಸಿನಿಮಾಗಳು ಬಂದಾಗ ಹುರಿದುಂಬಿಸುವ ರಮ್ಯಾ ಇಂದಿಗೂ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ನಂಬರ್ ವನ್ ಸ್ಥಾನದಲ್ಲಿದ್ದ ನಟಿ ರಮ್ಯಾ. ರಮ್ಯಾ ಸಿನಿಮಾದಲ್ಲಿ ಬಣ್ಣ ಹಚ್ಚಿ 8 ವರ್ಷಗಳೇ ಕಳೆದಿದೆ. ಆದರೂ ರಮ್ಯಾಗಿರೋ ಅಭಿಮಾನಿಗಳ ಸಂಖ್ಯೆ ಕೊಂಚವು ಕಮ್ಮಿಯಾಗಿಲ್ಲ ಅನ್ನೋದನ್ನ ರಮ್ಯಾ ಪಡೆದುಕೊಂಡಿರುವ ಸ್ಥಾನವೇ ಸಾಕ್ಷಿ. Ormax Media ನಡೆಸಿದ ಸಮೀಕ್ಷೆಯಲ್ಲಿ ರಮ್ಯಾ 4ನೇ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನೂಳಿದ ಸ್ಥಾನವನ್ನು ರಾಧಿಕಾ ಪಂಡಿತ್, ರಶ್ಮಿಕಾ ಮಂದಣ್ಣ, ರಚಿತಾ ರಾಮ್ ಹಾಗೂ ಆಶಿಕಾ ರಂಗನಾಥ್ ಪಡೆದುಕೊಂಡಿದ್ದಾರೆ. ಮೊದಲ ಸ್ಥಾನದಲ್ಲಿ ನಟಿ ರಶ್ಮಿಕಾ ಮಂದಣ್ಣ ಇದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಂತಸ ಹಂಚಿಕೊಂಡಿರುವ ರಮ್ಯಾ, ‘8 ವರ್ಷದಿಂದ ನಾನು ಚಿತ್ರರಂಗದಿಂದ ದೂರ ಉಳಿದುಕೊಂಡಿದ್ದರೂ ಕೂಡ ಈ ಪಟ್ಟಿಯಲ್ಲಿ ಸ್ಥಾನ ಸಿಕ್ಕಿದೆ. ರಚಿತಾ ರಾಮ್​, ಆಶಿಕಾ ರಂಗನಾಥ್​, ರಶ್ಮಿಕಾ ಮಂದಣ್ಣ, ರಾಧಿಕಾ ಪಂಡಿತ್​ ಜೊತೆ ಈ ಪಟ್ಟಿಯಲ್ಲಿ ನಾನು ಕೂಡ ಸ್ಥಾನ ಪಡೆದಿರುವುದಕ್ಕೆ ಖುಷಿ ಆಗುತ್ತಿದೆ’ ಎಂದು ಬರೆದುಕೊಂಡಿದ್ದಾರೆ. 2003ರಲ್ಲಿ ಅಭಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ರಮ್ಯಾ ಬಳಿಕ ನಂಬರ್ ಒನ್ ಸ್ಥಾನ ಗಿಟ್ಟಿಸಿಕೊಂಡರು. ಪುನೀತ್ ರಾಜ್ ಕುಮಾರ್, ದರ್ಶನ್, ಸುದೀಪ್, ಉಪೇಂದ್ರ, ಗಣೇಶ್ ಸೇರಿದಂತೆ ಸಾಕಷ್ಟು ಸ್ಟಾರ್ ನಟರ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ಆದಷ್ಟು ಬೇಗ ರಮ್ಯಾ ಮತ್ತೆ ಬಣ್ಣದ ಬದುಕಿಗೆ ಎಂಟ್ರಿಕೊಡಲಿ ಎಂಬುದು ಅವರ ಅಭಿಮಾನಿಗಳ ಬಹು ದಿನಗಳ ಆಸೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now