ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಸ್ವಾರ್ಥ ತುಂಬಿದ ಚಿತ್ರರಂಗ ನಮ್ಮದು ಎಂದು ಟ್ವೀಟ್ ನಲ್ಲಿ ಹರಿಹಾಯ್ದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ
ರಂಗವನ್ನು ನಿಂಧಿಸಿದ್ದಾರೆ.
ಕೃಷ್ಣಂರಾಜು ಅಂತಹ ದೊಡ್ಡ ಕಲಾವಿದ ನಿಧನರಾದಾಗಲೂ ಅವರ ಗೌರವಾರ್ಥ ಒಂದು ದಿನವಾದರೂ ಚಿತ್ರೀಕರಣ ಬಂದ್ ಮಾಡಿ ಶೋಕಾಚರಣೆ ಆಚರಿಸಲಾಗುತ್ತಿಲ್ಲ. ಇದು ನಾಚಿಕೆಗೇಡಿನ ಸಂಗತಿ. ಎಂಥ ಸ್ವಾರ್ಥ ತುಂಬಿದ ಚಿತ್ರರಂಗ ನಮ್ಮದು ಎಂದು ವರ್ಮಾ ಟ್ವೀಟ್ ಮಾಡಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ ಈ ವಿಚಾರವಾಗಿ ನಾನು ಸೂಪರ್ ಸ್ಟಾರ್ ಕೃಷ್ಣ, ಮುರುಳಿ ಮೋಹನ್, ಚಿರಂಜೀವಿ, ಮೋಹನ್ ಬಾಬು, ಬಾಲಯ್ಯ, ಪ್ರಭಾಸ್, ಮಹೇಶ್ ಬಾಬು, ಪವನ್ ಕಲ್ಯಾಣ್ ಅವರಲ್ಲಿ ಮನವಿ ಮಾಡುತ್ತಿದ್ದೇನೆ. ನಾಳೆ ನಿಮ್ಮಲ್ಲಿ ಯಾರಿಗೂ ಇದೇ ಸ್ಥಿತಿ ಬರದೆ ಇರುವುದಿಲ್ಲ. ಒಬ್ಬ ಮಹಾನ್ ಕಲಾವಿದನಿಗೆ ಸೂಕ್ತ ರೀತಿಯ ವಿದಾಯ ನೀಡದಿರುವುದು ನಮ್ಮ ಮೇಲೆಯೇ ಉಗುಳಿಕೊಂಡಂತೆ ಎಂದಿದ್ದಾರೆ.
ನಮಗೆ ಮನಸ್ಸಿಲ್ಲದಿದ್ದರೂ ಪರವಾಗಿಲ್ಲ. ನಮ್ಮ ಸಾವಿಗೆ ಸೂಕ್ತ ಗೌರವ ಧಕ್ಕಲಿ ಎಂಬ ಕಾರಣಕ್ಕಾದರೂ ಕೃಷ್ಣಂರಾಜು ರಂತಹ ಸಜ್ಜನರಿಗೆ ಗೌರವ ನೀಡೋಣ. ಎರಡು ದಿನವಾದರೂ ಶೂಟಿಂಗ್ ನಿಲ್ಲಿಸೋಣ.ಹೆಚ್ಚು ಹಣ ಖರ್ಚಾಗುತ್ತಿದೆ ಎಂಬ ಕಾರಣಕ್ಕೆ ತಿಂಗಳು ಗಟ್ಟಲೆ ಶೂಟಿಂಗ್ ನಿಲ್ಲಿಸಿದ ಉದ್ಯಮ ನಮ್ಮದು. ನಮ್ಮ ಸಾವಿಗೆ ಸಾರ್ಥಕತೆ ಬೇಕಿದ್ದರೆ ದಿವಂಗತ ಕೃಷ್ಣಂ ರಾಜು ಅಂತಹ ಸಜ್ಜನರಿಗೆ ಬೆಲೆ ನೀಡೋಣ ಎರಡು ದಿನವಾದರೂ ಶೂಟಿಂಗ್ ನಿಲ್ಲಿಸೋಣ ಎಂದಿದ್ದಾರೆ.
ನಟ ಪ್ರಭಾಸ್ ದೊಡ್ಡಪ್ಪ 83 ವರ್ಷದ ಕೃಷ್ಣಂರಾಜು ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 180ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಕೃಷ್ಣಂರಾಜು ಟಾಲಿವುಡ್ ರೆಬೆಲ್ ಸ್ಟಾರ್ ಎಂದೇ ಖ್ಯಾತಿ ಘಳಿಸಿದ್ದರು.
మనసు లేకపోయినా ఓకే. కనీసం మన చావుకి విలువ ఉండాలంటే పోయిన కృష్ణంరాజుగారి లాంటి పెద్దమనిషికి విలువ ఇద్దాం .. కనీసం రెండు రోజులు షూటింగ్ ఆపుదాం. డబ్బు ఎక్కువ ఖర్చు అయిపోతోంది అని నెలరోజులు షూటింగ్ ఆపేసిన పరిశ్రమ మనది 🙏
— Ram Gopal Varma (@RGVzoomin) September 11, 2022
