• June 13, 2026

ಕೋವಿಡ್ ಬೂಸ್ಟರ್ ಡೋಸ್ ಲಸಿಕೆಯನ್ನು ವಯಾಗ್ರಕ್ಕೆ ಹೋಲಿಸಿದ ನಟಿ ರಾಕಿ ಸಾವಂತ್

ವಿವಾದಗಳ ಹೇಳಿಕೆಗಳ ಮೂಲಕವೇ ಸದಾ ಸುದ್ದಿಯಲ್ಲಿರೋ ನಟಿ ರಾಕಿ ಸಾವಂತ್ ಇದೀಗ ಮತ್ತೊಂದು ಹೇಳಿಕೆ ನೀಡಿ ಟ್ರೋಲ್ ಆಗಿದ್ದಾರೆ. ಸಾಂಕ್ರಾಮಿಕ ರೋಗ ಕೋವಿಡ್ ನಿಂದ ಪರಾಗಲು ಸರ್ಕಾರ ಬೂಸ್ಟರ್ ಡೋಸ್ ತೆಗೆದುಕೊಳ್ಳುವಂತೆ ಸೂಚನೆ ನೀಡಿದೆ. ಆದರೆ ಇದೀಗ ನಟಿ ರಾಕಿ ಸಾವಂತ್ ಬೂಸ್ಟರ್ ಡೋಸ್ ಅನ್ನು ವಯಾರ್ಗಕ್ಕೆ ಹೋಲಿಸಿದ್ದಾರೆ. ಬಾಯ್ ಫ್ರೆಂಡ್ ಊರಿಗೆ ತೆರಳಲು ವಿಮಾನ ನಿಲ್ದಾಣಕ್ಕೆ ತೆರಳಿದ್ದ ರಾಖಿ ಸಾವಂತ್ ಅವರನ್ನು ಪಾಪರಾಜಿಗಳು ಮಾತನಾಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಅವರ ಆರೋಗ್ಯದ ಬಗ್ಗೆಯೂ ವಿಚಾರಿಸಿದ್ದಾರೆ. ಈ ವೇಳೆ ಪ್ರತಿಕ್ರಿಯಿಸಿದ ರಾಕಿ, ನನ್ನ ಜೀವನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹಾಳು ಮಾಡಿಬಿಟ್ಟರು. ಬೂಸ್ಟರ್ ಡೋಸ್ ತಗೆದುಕೊಂಡ ಬಳಿಕ ಎದೆಬಡಿತ ಜಾಸ್ತಿ ಅನಿಸುತ್ತಿದೆ. ಎದೆಯೊಳಗೆ ಏನೋನೋ ಆಗುತ್ತಿದೆ. ವಯಾಗ್ರ ತಿಂದಂತಹ ನೋವದು. ಬೂಸ್ಟರ್ ಡೋಸ್ ತಗೆದುಕೊಂಡು ಎರಡು ದಿನದಿಂದ ಒದ್ದಾಡ್ತಾ ಇದ್ದೇನೆ ಎಂದರು. ಮೈಸೂರು ಮೂಲಕ ಬಾಯ್ ಫ್ರೆಂಡ್ ಆದಿಲ್ ತಮ್ಮ ಮನೆಗೆ ಆಗಮಿಸಿದ್ದಾರೆ. ಇದೀಗ ಆದಿಲ್ ರನ್ನ ನೋಡಲು ರಾಕಿ ಮೈಸೂರು ಪ್ಲೈಟ್ ಹತ್ತಿದ್ದಾರೆ. ಒಂದು ಕಡೆ ಬೂಸ್ಟರ್ ಡೋಸ್ ತೆಗೆದುಕೊಂಡಿರುವ ನೋವು, ಮತ್ತೊಂದು ಕಡೆ ಬಾಯ್ ಫ್ರೆಂಡ್ ಸನಿಹದಲ್ಲಿಲ್ಲದ ಸ್ಥಿತಿ ಯಾರಿಗೂ ಬರಬಾರದು ಎಂದು ರಾಕಿ ಸಾವಂತ್ ಹೇಳಿದ್ದಾರೆ.  

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now