ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಬಿಗ್ ಬಾಸ್ ಫಿನಾಲೆ ವಾರಕ್ಕೆ ಎಂಟ್ರಿಕೊಟ್ಟ ರಾಕೇಶ್, ರೂಪೇಶ್, ಸಾನ್ಯಾ
ದೊಡ್ಮನೆ ಒಳಗೆ ಜಯಶ್ರೀ ಆರಾಧ್ಯ, ಸೋನು ಶ್ರೀನಿವಾಸ್ ಗೌಡ, ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ, ಸಾನ್ಯಾ ಅಯ್ಯರ್, ಸೋಮಣ್ಣ ಮಾಚಿಮಾಡ, ರೂಪೇಶ್ ಶೆಟ್ಟಿ,ನಂದಿನಿ, ಜಶ್ವಂತ್ ನಡುವೆ ಭಾರೀ ಪೈಪೋಟಿ ಮುಂದುವರಿದಿದೆ. ಪ್ರೇಕ್ಷಕರ ಆಯ್ಕೆಯ ಮೇರೆಗೆ ರಾಕೇಶ್ ನೇರವಾಗಿ ಫಿನಾಲೆ ವಾರಕ್ಕೆ ಎಂಟ್ರಿ ಪಡೆದಿದ್ದಾರೆ. ಕ್ಯಾಪ್ಟನ್ ಆದ ಕಾರಣಕ್ಕೆ ರೂಪೇಶ್ ಕೂಡ ಫಿನಾಲೆ ವಾರಕ್ಕೆ ಎಂಟ್ರಿಯಾಗಿದ್ದಾರೆ. ಜೊತೆಗೆ ಫೀನಾಲೆಗೆ ಇನ್ನೊಬ್ಬರನ್ನು ಆಯ್ಕೆ ಮಾಡುವ ಅವಕಾಶ ಕ್ಯಾಪ್ಟನ್ಗೆ ನೀಡಲಾಯಿತು. ಈ ವೇಳೆ ರೂಪೇಶ್ ಸಾನ್ಯಾ ಐಯ್ಯರ್ ಹೆಸರನ್ನು ಆಯ್ಕೆ ಮಾಡಿದ್ದಾರೆ.
ಉಳಿದ ಸ್ಪರ್ಧಿಗಳಾದ ಸೋನು ಶ್ರೀನಿವಾಸ್ ಗೌಡ, ಆರ್ಯವರ್ಧನ್ ಗುರೂಜಿ, ನಂದಿನಿ, ಜಶ್ವಂತ್, ಸೋಮಣ್ಣ ಮಾಚಿಮಾಡ, ಜಯಶ್ರೀ ಆರಾಧ್ಯ ನಾಮಿನೇಟ್ ಆಗಿದ್ದಾರೆ. ಐದನೇ ವಾರದಲ್ಲಿ ಯಾರು ಎಲಿಮಿನೇಟ್ ಆಗುತ್ತಾರೆ ಎಂಬ ಕುತೂಹಲ ಮನೆ ಮಾಡಿದೆ.
