• December 22, 2025

ದತ್ತಣ್ಣ, ಅವಿನಾಶ್, ಸಿಹಿ ಕಹಿ ಚಂದ್ರು ಸೇರಿ 67 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ

ಕನ್ನಡ ನಾಡು, ನುಡಿಗೆ ತಮ್ಮದೇ ಆದ ಕೊಡುಗೆ ನೀಡಿದವರಿಗೆ ಪ್ರತಿವರ್ಷ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಅಂತೆಯೇ ಈ ಬಾರಿಯೂ ಒಟ್ಟು  67 ಮಂದಿಗೆ ಪ್ರಶಸ್ತಿ ನೀಡಲಾಗುತ್ತಿದ್ದು ಹಿರಿಯ ನಟರಾದ ದತ್ತಣ್ಣ, ಸಿಹಿಕಹಿ ಚಂದ್ರು, ಅವಿನಾಶ್‌ ಅವರಿಗೂ ಪ್ರಶಸ್ತಿ ನೀಡಲಾಗುತ್ತಿದೆ. ಸಿನಿಮಾ ರಂಗದಲ್ಲಿನ ಸೇವೆಯನ್ನು ಪರಿಗಣಿಸಿ ಅವಿನಾಶ್‌ ಮತ್ತು ದತ್ತಣ್ಣ ಅವರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಇನ್ನೂ ಕಿರುತೆರೆ ವಿಭಾಗದಲ್ಲಿ ಸಿಹಿ ಕಹಿ ಚಂದ್ರು ಅವರಗೆ ಪ್ರಶಸ್ತಿ ನೀಡಲಾಗುತ್ತಿದೆ. ದತ್ತಣ್ಣ ಎಂಬ ಹೆಸರಿನೊಂದಿಗೆ ಖ್ಯಾತಿ ಪಡೆದಿರುವ ದತ್ತಾತ್ತೇಯ ಅವರು ಸುಮಾರು 300ಕ್ಕೂ ಅಧಿಕ ಸಿನಿಮಾ, ನಾಟಕ ಹಾಗೂ ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ. ಇನ್ನೂ ಹಿರಿಯ ನಟ ಅವಿನಾಶ್‌ ದಕ್ಷಿಣ ಭಾರತದ ಹಲವು ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕಳೆದ 37 ವರ್ಷಗಳಿಂದ ಸಿನಿ ಇಂಡಸ್ಟ್ರಿಯಲ್ಲಿರುವ ಅವಿನಾಶ್ ಇದುವರೆಗೂ 500ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಸಿಹಿಕಹಿ ಚಂದ್ರು ಸದ್ಯ ಅಮೆರಿಕ ಪ್ರವಾಸದಲ್ಲಿದ್ದಾರೆ. ‘ಕಾಂತ ಮತ್ತು ಕಾಂತ’ ನಾಟಕ ಪ್ರದರ್ಶನಕ್ಕಾಗಿ ಅಲ್ಲಿಗೆ ಹೋಗಿದ್ದಾರೆ. ಅವರ ಪರವಾಗಿ ಚಂದ್ರು ಪತ್ನಿ ಗೀತಾ ಪ್ರಶಸ್ತಿಯನ್ನು ಪಡೆದುಕೊಳ್ಳಲಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now