• January 1, 2026

ಕೈತುಂಬಾ ಸಿನಿಮಾ, ದುಬಾರಿ ಸಂಭಾವನೆ ಇದ್ರು ಮನೆ ಮಾರಿಕೊಂಡ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್

ಬಾಲಿವುಡ್ ಬ್ಯೂಟಿ ದಿವಂಗತ ನಟಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ನಿತ್ಯ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಲೆ ಇರುತ್ತಾರೆ. ಸಿನಿಮಾಗಳ ಹೊರತಾಗಿ ತಮ್ಮ ವೈಯಕ್ತಿಕ ಜೀವನಕ್ಕೆ ಹೆಚ್ಚು ಸುದ್ದಿಯಾಗೋ ಜಾನ್ವಿ ಇದೀಗ ಮನೆ ಮಾರಿಕೊಂಡು ಸುದ್ದಿಯಾಗಿದ್ದಾರೆ. ಸೆಲೆಬ್ರಿಟಿ ಕಿಡ್ ಎಂಬ ಕಾರಣಕ್ಕೆ ಜಾನ್ವಿ ಕಪೂರ್ ಗೆ ಸಾಕಷ್ಟು ಅವಕಾಶಗಳು ಬರುತ್ತಿವೆ. ಜೊತೆಗೆ ಕೈತುಂಬಾ ಸಂಭಾವನೆಯೂ ಸಿಗುತ್ತಿದೆ. ಈ ಮಧ್ಯೆ ದುಬಾರಿ ಮನೆಯನ್ನು ಮಾರಿಕೊಂಡಿದ್ದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. 2020ರಲ್ಲಿ ಜಾನ್ವಿ ಕಪೂರ್ 39ಕೋಟಿ ರೂಪಾಯಿ ನೀಡಿ ಜುಹೂವಿನ ಪ್ರತಿಷ್ಠಿತ ಅಪಾರ್ಟ್ ಮೆಂಟ್ ನಲ್ಲಿ 14, 15 ಹಾಗೂ 16ನೇ ಫ್ಲೋರ್ ನಲ್ಲಿ ಇರುವ ಫ್ಲಾಟ್ ಖರೀದಿಸಿದ್ದರು. ಆರು ಪಾರ್ಕಿಂಗ್ ಸ್ಲಾಟ್ ಗಳನ್ನು ಒಳಗೊಂಡಿರುವ ಪ್ರಾಪರ್ಟಿಗೆ ಸಾಕಷ್ಟು ಬೇಡಿಕೆ ಇದೆ. ಇದೀಗ ಈ ಜಾಗವನ್ನು ಜಾನ್ವಿ 44 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದು 5 ಕೋಟಿ ರೂಪಾಯಿ ಲಾಭ ಪಡೆದುಕೊಂಡಿದ್ದಾರೆ. ಮೂಲಗಳ ಪ್ರಕಾರ ಈ ವರ್ಷದ ಮಾರ್ಚ್ ತಿಂಗಳಲ್ಲಿ ಜಾನ್ವಿ ಕಪೂರ್ ಹಾಗೂ ರಾಜ್ ಕುಮಾರ್ ರಾವ್ ನಡುವೆ ಡೀಲ್ ನಡೆದಿದ್ದು, ಜುಲೈ 21ಕ್ಕೆ ರಿಜಿಸ್ಟ್ರೇಷನ್ ಮಾಡಿಸಲಾಗಿತ್ತು. ರಾಜ್ ಕುಮಾರ್ ರಾವ್ ಬರೋಬ್ಬರಿ 2.19 ಕೋಟಿ ರೂಪಾಯಿ ಸ್ಟಾಂಪ್ ಡ್ಯೂಡಿ ಪಾವತಿಸಿದ್ದು,ಸದ್ಯ ಖರೀದಿ ಮಾಡಿರುವ ಅಪಾರ್ಟ್ ಮೆಂಟ್ ನಲ್ಲಿ ರಾಜ್ ಕುಮಾರ್ ಹಾಗೂ ಪತ್ರಲೇಖ ದಂಪತಿ ವಾಸ ಮಾಡಲಿದ್ದಾರೆ. ಮುಂಬೈನ ಪ್ರತಿಷ್ಠಿತ ಸ್ಥಳವಾದ ಜುಹೂವಿನಲ್ಲಿ ಆಸ್ತಿ ಖರೀದಿ ಮಾಡಬೇಕು ಅನ್ನೋದು ಸಾಕಷ್ಟು ಮಂದಿಯ ಕನಸು. ಆದರೆ ಇರುವ ಜಾಗವನ್ನು ಜಾನ್ವಿ ಮಾರಿಕೊಂಡಿರೋದು ಹಲವು ಕುತೂಹಲಕ್ಕೆ ಕಾರಣವಾಗಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now