• March 14, 2026

ಜೀವನದಲ್ಲಿ 10 ಪರ್ಸೆಂಟ್ ಕೂಡ ನೆಮ್ಮದಿ ಇಲ್ಲಾ: ರಜನಿಕಾಂತ್

ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಕೋಟ್ಯಾಂತರ ರೂಪಾಯಿ ಒಡೆಯ. ಮನೆ ತುಂಬಾ ಆಳುಕಾಳು, ಕೈತುಂಬಾ ಹಣ, ದುಬಾರಿ ಬಂಗಲೆ, ಐಷಾರಾಮಿ ಕಾರುಗಳಿದ್ದರು ರಜನಿಕಾಂತ್ ಗೆ ಕೊಂಚವೂ ನಿಮ್ಮದಿ ಇಲ್ಲ. ಹೀಗಾಂತ ಸ್ವತಃ ಸೂಪರ್ ಸ್ಟಾರ್ ರಜನಿಕಾಂತ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. 71 ವರ್ಷ ವಯಸ್ಸಿನ ರಜನಿಕಾಂತ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 71ರ ಹರೆಯದಲ್ಲೂ ಚಿರ ಯುವಕರನ್ನು ನಾಚಿಸುವಂತಹ ಸೂಪರ್ ಸ್ಟಾರ್ ರಿಯಲ್ ಲೈಫ್ ನಲ್ಲಿ 10 ಪರ್ಸೆಂಟ್ ಕೂಡ ನೆಮ್ಮದಿ ಇಲ್ಲ ಎಂದಿದ್ದಾರೆ. ಇತ್ತೀಚೆಗೆ ರಜನಿಕಾಂತ್ ಮಗಳು ಐಶ್ವರ್ಯ ಹಾಗೂ ನಟ ಧನುಷ್ ಡಿವೋರ್ಸ್ ಪಡೆದುಕೊಂಡಿದ್ದಾರೆ. ಮಗಳ ಡಿವೋರ್ಸ್ ಸಂದರ್ಭದಲ್ಲಿ ರಜನಿಕಾಂತ್ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಮಗಳ ಡಿವೋರ್ಸ್ ರಜನಿಕಾಂತ್ ರನ್ನ ಇನ್ನಿಲ್ಲದಂತೆ ಕಾಡುತ್ತಿದೆಯಾ? ಇದೇ ಕಾರಣಕ್ಕೆ ರಜನಿಕಾಂತ್ ರಿಯಲ್ ಲೈಫ್ ನಲ್ಲಿ ನೆಮ್ಮದಿ ಇಲ್ಲವಾ ಅನ್ನೋ ಪ್ರಶ್ನೆ ಎದುರಾಗಿದೆ.  

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now