• January 1, 2026

ಪುನೀತ್ ಗೆ ಕರ್ನಾಟಕ ರತ್ನ ಪ್ರಧಾನ ಕಾರ್ಯಕ್ರಮಕ್ಕೆ ರಜನಿಕಾಂತ್, ಜೂ.NTRಗೆ ಆಹ್ವಾನ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ನವೆಂಬರ್ 1ರಂದು ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ. ಕಾರ್ಯಕ್ರಮಕ್ಕೆ ತಮಿಳು ಸೂಪರ್ ಸ್ಟಾರ್ ರಜನಿಕಾಂತ್, ತೆಲುಗಿನ ಖ್ಯಾತ ನಟ ಜೂ.ಎನ್ ಟಿ ಆರ್ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ರಜನಿಕಾಂತ್ ಗೂ ಬೆಂಗಳೂರಿಗೆ ಉತ್ತಮ ನಂಟಿದೆ. ತಮಿಳು ಚಿತ್ರರಂಗದಲ್ಲಿ ಖ್ಯಾತಿ ಘಳಿಸಿದ್ದರು ರಜನಿಕಾಂತ್ ಹುಟ್ಟಿ ಬೆಳೆದಿದೆಲ್ಲ ಬೆಂಗಳೂರಿನಲ್ಲಿ. ಅಲ್ಲದೆ ಡಾ.ರಾಜ್ ಕುಮಾರ್ ಫ್ಯಾಮಿಲಿ ಜೊತೆ ರಜನಿಕಾಂತ್ ಅವರಿಗೆ ಉತ್ತಮ ಬಾಂದವ್ಯವಿದೆ. ಇನ್ನೂ ನಟ ಜೂನಿಯರ್ ಎನ್ ಟಿ ಆರ್ ತಾಯಿ ಕರ್ನಾಟಕದವರು. ಜೊತೆಗೆ ಜೂನಿಯರ್ ಎನ್ ಟಿ ಆರ್ ಕೂಡ ರಾಜ್ ಕುಮಾರ್ ಕುಟುಂದೊಂದಿಗೆ ಉತ್ತಮ ಬಾಂದವ್ಯ ಹೊಂದಿದ್ದರು. ಪುನೀತ್ ರನ್ನು ಸಹೋದರ ಸಮನರಾಗಿ ಕಾಣುತ್ತಿದ್ದರು. ಹಾಗಾಗಿ ಇಬ್ಬರಿಗೂ ಕಾರ್ಯಕ್ರಮಕ್ಕೆ ಬರುವಂತೆ ಆಹ್ವಾನ ನೀಡಲಾಗಿದೆ. ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲಾಗಿದ್ದು, ಇಂಥದ್ದೊಂದು ಗೌರವಕ್ಕೆ ಈ ಮೊದಲು ಡಾ.ರಾಜ್ ಕುಮಾರ್ ಕೂಡ ಪಾತ್ರರಾಗಿದ್ದಾರೆ. ಕನ್ನಡ ಸಿನಿಮಾ ರಂಗದ ಸೇವೆಗಾಗಿ ಕರ್ನಾಟಕ ರತ್ನ ಪ್ರಶಸ್ತಿ ಪಡೆದ ತಂದೆ-ಮಗ ಎಂಬ ಖ್ಯಾತಿಗೂ ಈ ಇಬ್ಬರೂ ಪಾತ್ರರಾಗಿದ್ದಾರೆ. 1992ರಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು ಇದುವರೆಗೂ ಕೇವಲ 9 ಮಂದಿಗೆ ಮಾತ್ರವೇ ನೀಡಲಾಗಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now