• January 2, 2026

ಹಾಟ್ ಫೋಟೋ ಶೂಟ್ ಮಾಡಿಸಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ರಾಗಿಣಿ

ಒಂದು ಕಾಲದಲ್ಲಿ ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ನಟಿಯಾಗಿ ಮಿಂಚು ಹರಿಸಿದ್ದ ನಟಿ ರಾಗಿಣಿ ಡ್ರಗ್ಸ್ ಕೇಸ್ ಬಳಿಕ ಕೊಂಚ ಸೈಲೆಂಟ್ ಆಗಿದ್ದರು. ಜೊತೆಗೆ ಸಿನಿಮಾಗಳು ಕೂಡ ಆಗೋಮ್ಮೆ, ಈಗೊಮ್ಮೆ ಎನ್ನುವಂತಾಗಿದೆ. ಆದ್ರೆ ಇದೀಗ ರಾಗಿಣಿ ಮತ್ತೆ ಗಾಂಧಿನಗರದಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಅದಕ್ಕಾಗಿ ಹೊಸ ಫೋಟೋ ಶೂಟ್ ಕೂಡ ಮಾಡಿಸಿಕೊಂಡಿದ್ದಾರೆ. ವೀರ ಮದಕರಿ ಚಿತ್ರದ ಮೂಲಕ ಗಾಂಧಿನಗರಕ್ಕೆ ಎಂಟ್ರಿಕೊಟ್ಟ ತುಪ್ಪದ ಹುಡುಗಿ ಬಳಿಕ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ವೀರ ಮದಕರಿ, ಕೆಂಪೇಗೌಡ, ವಿಕ್ಟರಿ ಸೇರಿದಂತೆ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದ ರಾಗಿಣಿ ಮಹಿಳಾ ಪ್ರಧಾನ ಸಿನಿಮಾ ಮಾಡಿಯೂ ಸೈ ಎನಿಸಿಕೊಂಡರು. ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡ ರಾಗಿಣಿ ಬಳಿಕ ತಾನು ಕೂಡ ಸ್ಟಾರ್ ನಟಿಯಾಗಿ ಖ್ಯಾತಿ ಘಳಿಸಿದರು. ಶರಣ್ ನಟನೆಯ ಅಧ್ಯಕ್ಷ ಇನ್ ಅಮೆರಿಕಾ ಚಿತ್ರದಲ್ಲಿ ನಟಿಸಿದ ಬಳಿಕ ರಾಗಿಣಿ ಗಾಂಧಿನಗರದಿಂದ ದೂರವಾದರು. ಇದೀಗ ಮತ್ತೆ ಮಿಂಚು ಹರಿಸಲು ರೆಡಿಯಾಗಿದ್ದಾರೆ. ಗಾಂಧಿಗಿರಿ, ಒನ್ ಟು ಒನ್, ಕರ್ವ 3, ಜಾನಿವಾಕರ್ ಸೇರಿದಂತೆ ಹಲವು ಚಿತ್ರಗಳನ್ನು ಒಪ್ಪಿಕೊಂಡಿರುವ ರಾಗಿಣಿ, ಪ್ರಶಾಂತ್ ರಾಜ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ತೆಲುಗು ಸಿನಿಮಾದಲ್ಲಿ ವಿಶೇಷ ಪಾತ್ರ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ನಟ ಸಂತಾನಂ ನಟಿ ತಾನ್ಯಾ ಹೋಪ್ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ತಿದ್ದಾರೆ. ಕೆಲ ಸಮಯದ ಹಿಂದೆ ದಪ್ಪಗಿದ್ದ ರಾಗಿಣಿ ಇದೀಗ ಬಳುಕುವ ಬಳ್ಳಿಯಾಗಿದ್ದಾರೆ. ರಾಗಿಣಿಯ ಹೊಸ ಫೋಟೋ ಶೂಟ್ ಗೆ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದು ತರಹೇವಾರಿ ಕಾಮೆಂಟ್ ಗಳನ್ನು ಮಾಡ್ತಿದ್ದಾರೆ. ಡ್ರಗ್ಸ್ ಕೇಸಿನಲ್ಲಿ ಜೈಲಿಗೆ ಹೋಗಿ ಬಂದ ಬಳಿಕ ಚಿತ್ರರಂಗದಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದ ತುಪ್ಪದ ಹುಡುಗಿ ಇದೀಗ ಮತ್ತೆ ಸಿನಿಮಾ ರಂಗದಲ್ಲೂ ಆಕ್ಟೀವ್ ಆಗಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now