ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ: ಅಂದು ಅಪ್ಪ, ಇಂದು ಅಪ್ಪು ಎಂದ ರಾಘಣ್ಣ
`ಗಂಧದಗುಡಿ’ ಯಾಕೆ ಆ ಚಿತ್ರ ಮಾಡಿದ ಪ್ರಾಣಿ ಕಾಡಿನ ಬಗ್ಗೆ ಅವನಿಗಿದ್ದ ಕಾಳಜಿ, ಪ್ಲಾಸ್ಟಿಕ್ ಬಳಸಬೇಡಿ ಎಂಬ ಸಂದೇಶವಿತ್ತು. ಚಿಕ್ಕ ಮಕ್ಕಳಿಗೂ ಅದನ್ನ ಕಲಿಸಬೇಕು ಅದು ನಿಜವಾದ ಅವಾರ್ಡ್ ಎಂದು ರಾಘಣ್ಣ ಮಾತನಾಡಿದ್ದಾರೆ. ಅಭಿಮಾನಿ ದೇವರುಗಳು ಮಳೆಯಲ್ಲಿ ನಿಂತು ಕಾರ್ಯಕ್ರಮ ನೋಡಿದ್ದೀರ ನಿಮಗೆ ನನ್ನ ಸಾಷ್ಟಾಂಗ ನಮಸ್ಕಾರಗಳು ಎಂದು ರಾಘಣ್ಣ ಪ್ರತಿಯೊಬ್ಬರಿಗೂ ಧನ್ಯವಾದ ಹೇಳಿದರು.
ಪುನೀತ್ ರಾಜ್ ಕುಮಾರ್ ಅವರ ಕಲಾ ಸೇವೆ ಹಾಗೂ ಸಮಾಜ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಈ ವೇಳೆ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ತೆಲುಗು ನಟ ಜೂನಿಯರ್ ಎನ್ ಟಿ ಆರ್ ವಿಶೇಷ ಅತಿಥಿಗಳಾಗಿ ಆಗಮಿಸಿ ಅಪ್ಪು ಅವರ ಕುರಿತು ಮಾತನಾಡಿದರು.
