• January 2, 2026

ಪುಷ್ಪ ಸ್ಟೈಲ್ ನಲ್ಲಿ ಮಿಂಚಿದ ವಿಘ್ನ ನಿವಾರಕ: ಅಸಮಾಧಾನ ಹೊರ ಹಾಕಿದ ಭಕ್ತರು

ಇಂದು ಗಣೇಶ ಹಬ್ಬದ ಸಂಭ್ರಮ. ವಿವಿಧ ರೂಪದಲ್ಲಿ ಗಣೇಶನನ್ನು ಕೂರಿಸಿ ಭಕ್ತರು ಪೂಜೆ ಸಲ್ಲಿಸುತ್ತಾರೆ. ಸಿನಿಮಾ ಶೈಲಿಯಲ್ಲೂ ಗಣೇಶ ಮೂರ್ತಿಯನ್ನು ತಯಾರಿಸಿ ಪೂಜೆ ಸಲ್ಲಿಸಲಾಗುತ್ತಿದೆ. ಇದೀಗ ಪುಷ್ಪ ಸಿನಿಮಾದ ಸ್ಟೈಲ್ ನಲ್ಲಿ ಗಣಪತಿಯನ್ನು ತಯಾರಿಸಿದ್ದು ಕೆಲ ಅಭಿಮಾನಿಗಳು ಅಸಮಧಾನ ಹೊರ ಹಾಕಿದ್ದಾರೆ. ಕರ್ನಾಟದಲ್ಲಿ ಪುನೀತ್ ರಾಜ್ ಕುಮಾರ್ ರೀತಿಯಲ್ಲಿ ಗಣೇಶನನ್ನು ನಿರ್ಮಿಸಲಾಗಿದ್ದು ಅಭಿಮಾನಿಗಳು ಅಪ್ಪು ಗಣೇಶನನ್ನು ನೋಡಿ ಪುಲ್ ಖುಷಿ ಪಟ್ಟಿದ್ದಾರೆ. ಗಣೇಶನ ಜೊತೆ ಕುಳಿತಿರುವ ಪುನೀತ್ ರಾಜ್ ಕುಮಾರ್, ಕನ್ನಡದ ಕೋಟ್ಯಾಧಿಪತಿಯ ರೀತಿಯಲ್ಲಿರುವ ಗಣೇಶ ಹೀಗೆ ವಿವಿಧ ರೀತಿಯಲ್ಲಿ ಗಣೇಶನ ಮೂರ್ತಿಯನ್ನು ತಯಾರಿಸಲಾಗಿದೆ. ಇದೇ ರೀತಿಯಲ್ಲಿ ಸೂಪರ್ ಹಿಟ್ ಸಿನಿಮಾ ಪುಷ್ಪ ಸಿನಿಮಾದ ಸ್ಟೈಲ್ ನಲ್ಲೂ ಗಣೇಶನ ಮೂರ್ತಿಯನ್ನು ರೆಡಿ ಮಾಡಲಾಗಿದೆ. ಅಲ್ಲು ಅರ್ಜುನ್​ ಅವರು ‘ತಗ್ಗೆದೆಲೇ  ಎಂದು ಡೈಲಾಗ್​ ಹೊಡೆದ ರೀತಿಯಲ್ಲೇ ಗಣೇಶ ಮೂಡಿಬಂದಿದ್ದಾನೆ. ಆ ಫೋಟೋ ಮತ್ತು ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ಅಲ್ಲು ಅರ್ಜುನ್​ ಅಭಿಮಾನಿಗಳು ಇದನ್ನು ನೋಡಿ ಖುಷಿ ಪಟ್ಟರೆ ಮತ್ತೊಂದಷ್ಟು ಜನ ಅಸಮಾಧಾನ ಹೊರ ಹಾಕಿದ್ದಾರೆ. ಈ ಕುರಿತಂತೆ ಸೋಶಿಯಲ್​ ಮೀಡಿಯಾದಲ್ಲಿ ಹಲವು ಬಗೆಯ ಅಭಿಪ್ರಾಯ ವ್ಯಕ್ತವಾಗಿದೆ. ಕೆಲವರು ಇದನ್ನು ವಿರೋಧಿಸಿದ್ದಾರೆ. ‘ಓರ್ವ ನಟನ ಮೇಲೆ ಅಭಿಮಾನ ಇರುವುದು ಸಹಜ. ಆದರೆ ಗಣೇಶನಿಗೆ ಈ ರೂಪ ನೀಡಿರುವುದು ಸರಿಯಲ್ಲ. ನೀವು ಗಣಪನನ್ನು ಪೂಜಿಸುತ್ತಿದ್ದೀರೋ ಅಥವಾ ಅಣಕಿಸುತ್ತಿದ್ದೀರೋ’ ಎಂದು ನೆಟ್ಟಿಗರೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now