• June 21, 2026

ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ನಡೆಯಲಿದೆ ಈ ಬಾರಿಯ ಪುಷ್ಪೋತ್ಸವ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿ ಎಂಟು ತಿಂಗಳು ಕಳೆದಿದೆ. ಅಪ್ಪು ಅಗಲಿಕೆಯ ನೋವಿನಲ್ಲೂ ಅಭಿಮಾನಿಗಳು ಪುನೀತ್ ಹೆಸರನ್ನು ಅಮರವಾಗಿರಿಸಲು ನಾನಾ ರೀತಿಯ ಕೆಲಸಗಳನ್ನು ಮಾಡ್ತಿದ್ದಾರೆ. ಇದೀಗ ಸ್ವಾತಂತ್ರೋತ್ಸವದ ಹಿನ್ನೆಲೆಯಲ್ಲಿ ಲಾಲ್ ಬಾಗ್ ನಲ್ಲಿ ನಡೆಯಲಿರುವ ಪುಷ್ಪೋತ್ಸವವನ್ನು ನಟ ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಆಯೋಜಿಸಲಾಗುವುದು ಎಂದು ತೋಟಗಾರಿಕಾ ಸಚಿವ ಮುನಿರತ್ನ ಹೇಳಿದ್ದಾರೆ.   ವಿಧಾನಸೌಧದಲ್ಲಿ ಸುದ್ಧಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮುನಿರತ್ನ, ಆಗಸ್ಟ್ 5ರಿಂದ ಆಗಸ್ಟ್ 15ರ ವರೆಗೆ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಲಾಲ್ ಬಾಗ್ ಪುಷ್ಪೋತ್ಸವ ಆಯೋಜಿಸಲಾಗಿದ್ದು, ಈ ಬಾರಿ ಪುನೀತ್ ರಾಜ್ ಕುಮರ್ ಹೆಸರಿನಲ್ಲಿ ಪುಷ್ಪೋತ್ಸವ ನಡೆಯಲಿದೆ ಎಂದರು. ಆಗಸ್ಟ್ 5ರಂದು ಮುಖ್ಯಮಂತ್ರಿ ಬಸರವಾಜ ಬೊಮ್ಮಾಯಿ ಪುಷ್ಪೋತ್ಸವ ಉದ್ಘಾಟಿಸಲಿದ್ದು ಕೋವಿಡ್ ನಿಯಮಗಳ ಅನುಗುಣವಾಗಿ ಪುಷ್ಪೋತ್ಸವ ನಡೆಯಲಿದೆ. ಈ ಭಾರಿಯ ಪುಷ್ಪೋತ್ಸವದ ಒಟ್ಟು ಥೀಮ್ ಪುನೀತ್ ರಾಜ್ ಕುಮಾರ್ ಅವರ ಸಿನಿಮಾ ಹಾಗೂ ಅವರ ವ್ಯಕ್ತಿತ್ವವನ್ನು ಆಧರಿಸಿರಲಿದೆ. ಜೊತೆಗೆ ಅಪ್ಪು ಅವರ ಗಾಜನೂರಿನ ಮನೆಯನ್ನು ಸಹ ಹೂವಿನ ಅಲಂಕಾರದಿಂದ ನಿರ್ಮಿಸಲಾಗುವುದು ಎಂದು ಮುನಿರತ್ನ ಹೇಳಿದರು. ಈ ಬಾರಿಯ ಸ್ವಾತಂತ್ರ್ಯೋತ್ಸವಕ್ಕೆ ದೇಶ, ವಿದೇಶಗಳಿಂದ ವಿವಿಧ ರೀತಿಯ ಹೂವುಗಳು ಪುಪ್ಪೋತ್ಸವಕ್ಕೆ ತರಿಸುವುದರ ಜೊತೆಗೆ ಸ್ವಾತಂತ್ರ್ಯ ದಿನಾಚರಣೆ ಬಳಿಕವು ಕೆಲವು ದಿನಗಳ ಕಾಲ ಪುಷ್ಪೋತ್ಸವ ಮುಂದುವರಿಯಲಿ ಎಂದು ಸಚಿವರು ತಿಳಿಸಿದರು

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now