• March 16, 2026

ಕಾಂತಾರ ಸಿನಿಮಾದಲ್ಲಿ ಅಪ್ಪು ನಟಿಸಬೇಕಿತ್ತು: ಪುನೀತ್ ಮಾಡಬೇಕಿದ್ದ ಪಾತ್ರ ರಿಷಬ್ ಶೆಟ್ಟಿ ಪಾಲಾಗಿದ್ದು ಹೇಗೆ ಗೊತ್ತಾ?

ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರೋ ಕಾಂತಾರ ಸಿನಿಮಾ ಬಿಡುಗಡೆಗೆ ಇನ್ನೂ ಕೆಲವೇ ಕೆಲವು ದಿನಗಳು ಮಾತ್ರವೇ ಭಾಕಿ ಇದೆ. ಈಗಾಗ್ಲೆ ಸಿನಿಮಾದ ಟ್ರೈಲರ್ ಹಾಗೂ ಹಾಡುಗಳನ್ನು ನೋಡಿರೋ ಸಿನಿ ರಸಿಕರು ಸಿನಿಮಾ ನೋಡಲು ಕಾದು ಕೂತಿದ್ದಾರೆ. ಈ ಮಧ್ಯೆ ಇಂಟ್ರೆಸ್ಟಿಂಗ್ ಮಾಹಿತಿಯೊಂದು ಹೊರ ಬಿದ್ದಿದೆ. ಹೊಂಬಾಳೆ ಬ್ಯಾನರ್ ಅಡಿಯಲ್ಲಿ ಮೂಡಿ ಬರುತ್ತಿರುವ ಬಹುನಿರೀಕ್ಷಿತ ಕಾಂತಾರ ಸಿನಿಮಾದಲ್ಲಿ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೀರೋ ಆಗಿ ನಟಿಸಬೇಕಿತ್ತಂತೆ. ಈ ಬಗ್ಗೆ ಚಿತ್ರದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಗುಟ್ಟು ಬಿಟ್ಟುಕೊಟ್ಟಿದ್ದು ಬಳಿಕ ಪುನೀತ್ ನಟಿಸಬೇಕಿದ್ದು ಪಾತ್ರ ರಿಷಬ್ ಶೆಟ್ಟಿ ಪಾಲಾಯಿತು ಎಂದು ಹೇಳಿದ್ದಾರೆ. ಕಾಂತಾರ ಸಿನಿಮಾದ ಬಗ್ಗೆ ‘ಅನೇಕರಿಗೆ ಗೊತ್ತಿರದ ಮಾಹಿತಿ ಏನೆಂದರೆ, ಕಾಂತಾರ ಸಿನಿಮಾದಲ್ಲಿ ಅಪ್ಪು ಸರ್​ ಅವರೇ ಹೀರೋ ಆಗಬೇಕಿತ್ತು. ನಾವು ನಿರ್ದಿಷ್ಟ ಕಾಲಮಾನದಲ್ಲಿ ಈ ಸಿನಿಮಾವನ್ನು ಚಿತ್ರಿಸಬೇಕಿತ್ತು. ಅದರಿಂದಾಗಿ ಅವರ ಡೇಟ್​ ಕ್ಲ್ಯಾಶ್​ ಆಯ್ತು. ಹಾಗಾಗಿ ಸ್ವತಃ ಪುನೀತ್​ ಅವರೇ ರಿಷಬ್​ ಶೆಟ್ಟಿಯ ಹೆಸರು ಸೂಚಿಸಿದರು’ ಎಂದು ಕಾರ್ತಿಕ್​ ಗೌಡ ಇನ್ ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ. ಸಾಕಷ್ಟು ವಿಭಿನ್ನ ಪಾತ್ರಗಳಲ್ಲಿ ಪುನೀತ್ ಅವರನ್ನು ನೋಡಿದ್ದ ಅಭಿಮಾನಿಗಳು ಕಾಂತಾರ ಸಿನಿಮಾದಲ್ಲಿ ಡಿಫರೆಂಟ್ ಆಗಿ ನೋಡಬೇಕು ಅಂದುಕೊಂಡಿದ್ದರು.ಆದರೆ ಅದು ಕೈಗೂಡಲೇ ಇಲ್ಲ. ಪುನೀತ್ ಸಲಹೆಯಂತೆ ರಿಷಬ್ ಶೆಟ್ಟಿಯನ್ನು ಕಾಂತಾರ ಸಿನಿಮಾದಲ್ಲಿ ನಾಯಕನಾಗಿ ಹಾಕಿಕೊಂಡಿದ್ದು ಈ ಸಿನಿಮಾಗೆ ರಿಷಬ್ ಸಂಪೂರ್ಣ ನ್ಯಾಯ ಸಲ್ಲಿಸಿದ್ದಾರೆ ಅನ್ನೋದು ಟ್ರೈಲರ್ ನಲ್ಲಿ ಗೊತ್ತಾಗಿದೆ. ಸೆಪ್ಟೆಂಬರ್​ 30ರಂದು ‘ಕಾಂತಾರ’ ಸಿನಿಮಾ ತೆರೆಗೆ ಆಗಲಿದೆ. ಈಗಾಗಲೇ ಚಿತ್ರದ ‘ಸಿಂಗಾರ ಸಿರಿಯೇ..’ ಹಾಡು ಸೂಪರ್​ ಹಿಟ್​ ಆಗಿದೆ ಸದ್ಯದಲ್ಲೇ ಮತ್ತೊಂದು ಹಾಡು ಬಿಡುಗಡೆ ಆಗಲಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now