• January 2, 2026

ಪುನೀತ್ ಹೆಸರಿನಲ್ಲಿ ದೊಡ್ಟ ಮಟ್ಟದ ಸ್ಯಾಟ್ ಲೈಟ್ ಮಾಡಿದ್ರೆ ರಾಜ್ಯ ಸರ್ಕಾರವೆ ಹಣ ಭರಿಸುತ್ತದೆ: ಸಿಎಂ ಬೊಮ್ಮಾಯಿ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನರಾಗಿ ಒಂದು ವರ್ಷ ಕಳೆದಿದೆ. ಅಪ್ಪು ಹೆಸರಿನಲ್ಲಿ ಸಾಕಷ್ಟು ಕಡೆ ಅಭಿಮಾನಿಗಳು ನಾನಾ ರೀತಿಯ ಕೆಲಸಗಳನ್ನು ಮಾಡುತ್ತಿದ್ದಾರೆ. ಇದೀಗ ಬೆಂಗಳೂರಿನ ಮಲ್ಲೇಶ್ವರಂನ ಮಾಡೆಲ್ ಸ್ಕೂಲ್ ನಲ್ಲಿ ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ತಯಾರಾಗುತ್ತಿರುವ ಸ್ಯಾಟ್ ಲೈಟ್  ವರ್ಕ್ ಸ್ಟೇಶನ್ ನನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟನೆ ಮಾಡಿದರು. ಮಾಡೆಲ್ ಸ್ಕೂಲ್ ಉದ್ಘಾಟಿಸಿ ಮಾತನಾಡಿದ ಸಿಎಂ, ಸಿಎಂ, ‘ಯೋಗ್ಯವಾದ ವ್ಯಕ್ತಿ ಪುನೀತ್. ಇವತ್ತು ಅವರ ಪುಣ್ಯ ಸ್ಮರಣೆ ದಿನ. ಪುನೀತ್ ಸದಾ ಪ್ರಯೋಗಾತ್ಮಕವಾಗಿದ್ದರು. ಸೃಜನಶೀಲವಾಗಿದ್ದರೂ, ಹೊಸದನ್ನೂ ಹುಡುಕುತ್ತಿದ್ದರು’.  ‘ಪುನೀತ್ ಹೆಸರಿನಲ್ಲಿ ಸ್ಯಾಟ್ ಲೈಟ್ ಉದ್ಘಾಟನೆ ಮಾಡುವ ಮೂಲಕ ಅವರ ಕೀರ್ತಿಯನ್ನು ಆಕಾಶದ ಎತ್ತರಕೆ ತೆಗೆದುಕೊಂಡು ಹೋಗುವ ಕೆಲಸ ಮಲ್ಲೇಶ್ವರಂ ಸ್ಕೂಲ್ ಮಾಡ್ತಾ ಇದೆ. ಪುನೀತ್ ಹೆಸರಲ್ಲಿ ದೊಡ್ಡಮಟ್ಟದ ಸ್ಯಾಟ್ ಲೈಟ್ ಮಾಡಿದ್ರೆ ರಾಜ್ಯ ಸರ್ಕಾರದಿಂದಲೇ ಹಣ ಭರಿಸುತ್ತೇವೆ’ ಎಂದರು. ‘ಪುನೀತ್ ಅವರು ನಗುವಿನ ಮೂಲಕ ಎಲ್ಲರ ದುಃಖ  ದುಮ್ಮಾನಗಳನ್ನು ದೂರ ಮಾಡಿದ್ದಾರೆ. ಪುನೀತ್ ರಾಜಕುಮಾರ್ ಸದಾ ಹೊಸತನ, ಪ್ರಯೋಗ ಮಾಡುವ ಅಂತಃ ಕರಣ ಇರುವ ವ್ಯಕ್ತಿ. ಅವರ ಪರೋಪಕಾರಿ ಕೆಲಸ ಮಾಡಿದ್ದಾರೆ. ಪುನೀತ್ ನಮ್ಮ‌ ನಡುವೆಯೇ  ಇದ್ದಾರೆ ಎಂದು ಪುನೀತ್ ರಾಜ್ ಕುಮಾರ್ ಅವರ ಗುಣಗಾಯ ಮಾಡಿದರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now