• January 1, 2026

ಪುನೀತ್ ನಟಿಸಬೇಕಿದ್ದ ದ್ವಿತ್ವ ಸಿನಿಮಾಗೆ ಬರ್ತಾರಾ ಮಲಯಾಳಂನ ಆ ಸ್ಟಾರ್ ನಟ?

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನ ಹೊಂದಿ ಸಾಕಷ್ಟು ತಿಂಗಳುಗಳೇ ಕಳೆದು ಹೋಗಿವೆ. ಆದರೂ ಇಂದಿಗೂ ಅಪ್ಪು ಅಭಿಮಾನಿಗಳ ಮನಸ್ಸಲ್ಲಿ ಶಾಶ್ವತವಾಗಿದ್ದಾರೆ. ಪುನೀತ್ ರಾಜ್ ಕುಮಾರ್ ಹೆಸರನ್ನು ಜೀವಂತವಾಗಿಡಲು ಅಭಿಮಾನಿಗಳು ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡ್ತಿದ್ದಾರೆ. ಪುನೀತ್ ನಿಧನಕ್ಕೂ ಮುನ್ನ ನಿರ್ದೇಶಕ ಪವನ್ ಕುಮಾರ್ ಹೇಳಿದ್ದ ದ್ವಿತ್ವ ಕಥೆಯನ್ನು ಮೆಚ್ಚಿಕೊಂಡಿದ್ದರು. ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದರು. ಆದರೆ ಅದು ಕೈಗೂಡಲೇ ಇಲ್ಲ. ಆ ಬಳಿಕ ಪುನೀತ್ ಜಾಗಕ್ಕೆ ಯಾರು ಬರ್ತಾರೆ ಅನ್ನೋ ಕುತೂಹಲಕ್ಕೆ ಇದೀಗ ತೆರೆ ಬಿದ್ದಿದೆ. ಹೊಂಬಾಳೆ ಫಿಲ್ಸ್ಮ್ ಬ್ಯಾನರ್ ಅಡಿಯಲ್ಲಿ ಮೂಡಿ ಬರಲಿರೋ ದ್ವಿತ್ವ ಸಿನಿಮಾದಲ್ಲಿ ನಟಿಸಲು ಮಲಯಾಳಂ ಖ್ಯಾತ ನಟ ಫಯಾದ್ ಫಾಸಿಲ್ ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ. ಈಗಾಗ್ಲೆ ಲೂಸಿಯ ಪವನ್ ಕುಮಾರ್ ಕಥೆ ಹೇಳಿದ್ದು ಸಿನಿಮಾದಲ್ಲಿ ನಟಿಸಲು ಫಯಾದ್ ಓಕೆ ಎಂದಿದ್ದಾರೆ. ಈ ಇಬ್ಬರ ಕಾಂಬಿನೇಷನ್ ಸಿನಿಮಾಗೆ ಅದ್ದೂರಿ ಬಂಡವಾಳವನ್ನೇ ಹಾಕೋಕೆ ಹೊಂಬಾಳೆ ಫಿಲ್ಮ್ಸ್ ಮುಂದಾಗಿದೆ. ಪುನೀತ್ ನಟಿಸಬೇಕಿದ್ದ ದ್ವಿತ್ವ ಚಿತ್ರದಲ್ಲಿ ನಟಿಸಲು ಫಯಾದ್ ಬರ್ತಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಫಯಾದ್ ಹುಟ್ಟುಹಬ್ಬಕ್ಕೆ ಹೊಂಬಾಳೆ ಸಂಸ್ಥೆ ಶುಭ ಕೋರಿದೆ. ಈ ಮೂಲಕ ಹೊಂಬಾಳೆ ಸಂಸ್ಥೆ ಫಯಾದ್ ಜೊತೆ ಸಿನಿಮಾ ಮಾಡುವ ಸುಳಿವು ನೀಡಿದೆ. ಸೈಕಲಾಜಿಕಲ್​ ಕಥೆ ಹೊಂದಿರುವ ದ್ವಿತ್ವ ಸಿನಿಮಾ ಪೋಸ್ಟರ್ ಬಿಡುಗಡೆ ಮಾಡಿದ್ದು ಸಾಕಷ್ಟು ಸದ್ದು ಮಾಡಿತ್ತು. ಪುನೀತ್ ರಾಝ್ ಕುಮಾರ್ ಸಾಕಷ್ಟು ವಿಭಿನ್ನ ಗೆಟಪ್ ನಲ್ಲಿ ಗೆಟಪ್ ನಲ್ಲಿ ಪೋಸ್ಟರ್ ನಲ್ಲಿ ಕಾಣಿಸಿಕೊಂಡಿದ್ದರು. 2018ರಲ್ಲಿ ತೆರೆಕಂಡ ಯುಟರ್ನ್ ಸಿನಿಮಾದ ಬಳಿಕ ನಿರ್ದೇಶನ ಪವನ್ ಕುಮಾರ್ ಮತ್ತೆ ನಿರ್ದೇಶನಕ್ಕೆ ಇಳಿದಿದ್ದು ದ್ವಿತ್ವ ಸಿನಿಮಾ ಸಾಕಷ್ಟು ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now