• March 14, 2026

ಅಕ್ಟೋಬರ್ ಅಂತ್ಯಕ್ಕೆ ಬಿಡುಗಡೆ ಆಗಲಿದೆ ಪುನೀತ್ ರಾಜ್ ಕುಮಾರ್ ಡ್ರೀಮ್ ಪ್ರಾಜೆಕ್ಟ್ ಗಂಧದ ಗುಡಿ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕನಸಿನ ಗಂಧದ ಗುಡಿ ಸಾಕ್ಷ್ಯಚಿತ್ರ ಅಕ್ಟೋಬರ್28ರಂದು ಬಿಡುಗಡೆ ಆಗಲಿದೆ ಎಂದು ಪುನೀತ್ ಪತ್ನಿ ಅಶ್ವೀನಿ ಪುನೀತ್ ರಾಜ್ ಕುಮಾರ್ ತಿಳಿಸಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಅಶ್ವಿನಿ, ಅಪ್ಪು ಅವರ ಕೊನೆಯ ಚಿತ್ರ. ಅವರು ಅವರಾಗಿಯೇ ಕಾಣಿಸಿಕೊಂಡಿರುವ ವಿಶಿಷ್ಟ ಕಥನ. ಕರ್ನಾಟಕದ ಅದ್ಭುತ ಜಗತ್ತನ್ನು ಅನ್ವೇಷಿಸುವ ಪಯಣ. ಅವರಿಗೆ ಅಪಾರ ಪ್ರೀತಿಯನ್ನು ಕೊಟ್ಟ ನಾಡಿಗೆ ಅವರು ಪ್ರೀತಿಯ ಕಾಣಿಕೆ ಎಂದು ಅಶ್ವಿನಿ ಬರೆದುಕೊಂಡಿದ್ದಾರೆ. ಗಂಧದ ಗುಡಿ ಸಾಕ್ಷ್ಯಚಿತ್ರ ಪುನೀತ್ ಅವರ ಡ್ರೀಮ್ ಪ್ರಾಜೆಕ್ಟ್. ವೈಲ್ಡ್ ಕರ್ನಾಟಕ ಡಾಕ್ಯುಮೆಂಟರಿ ಮಾಡಿದ್ದ ಅಮೋಘ ವರ್ಷ ಜೊತೆ ಸೇರಿ ಪುನೀತ್ ಗಂಧದ ಗುಡಿ ಸಾಕ್ಷ್ಯಚಿತ್ರವನ್ನು ರೆಡಿ ಮಾಡಿದ್ದರು. ರಾಜ್ಯದ ನಾನಾ ಕಡೆಗಳಲ್ಲಿ ಭೇಟಿ ನೀಡಿ ಶೂಟ್ ಮಾಡಲಾಗಿತ್ತು. ನಮ್ಮ ನಾಡಿನ, ಕಾಡಿನ ಸಂಪತ್ತನ್ನು ಈ ಸಾಕ್ಷ್ಯ ಚಿತ್ರದಲ್ಲಿ ಪರಿಚಯಿಸುವ ಕೆಲಸ ಮಾಡಿದ್ದಾರೆ ಪುನೀತ್ ರಾಜ್ ಕುಮಾರ್. ಗಂಧದ ಗುಡಿ ಸಿನಿಮಾದ ಬಗ್ಗೆ ಸಾಕಷ್ಟು ಕನಸು ಕಂಡಿದ್ದ ಪುನೀತ್ ಇದರ ಟೀಸರ್ ರಿಲೀಸ್ ಮಾಡೋಕೆ ದಿನಾಂಕವನ್ನು ನಿಗಧಿ ಮಾಡಿದ್ದರು. ಆದರೆ ಅದಕ್ಕೂ ಮೊದಲೇ ಪುನೀತ್ ನಿಧನರಾದರು. ಇದೀಗ ಪುನೀತ್ ಕನಸಿನ ಕೂಸನ್ನು ಅಭಿಮಾನಿಗಳ ಮುಂದೆ ತರೋಕೆ ಅಶ್ವಿನಿ ಪುನೀತ್ ರಾಜ್ ಕುಮಾರ್ ರೆಡಿಯಾಗಿದ್ದು, ಥಿಯೇಟರ್ ನಲ್ಲಿ ರಿಲೀಸ್ ಮಾಡುತ್ತಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now