• March 14, 2026

ಪುನೀತ್ ರಾಜ್ ಕುಮಾರ್ ಅಗಲಿ 9 ತಿಂಗಳು: ಸಮಾಧಿಗೆ ಪೂಜೆ ಸಲ್ಲಿಸಿ ಭಾವುಕರಾದ ಕುಟುಂಬ ಸದಸ್ಯರು

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿ 9 ತಿಂಗಳು ಕಳೆದಿದೆ. ಈ ಹಿನ್ನೆಲೆಯಲ್ಲಿ ಇಂದು ಪುನೀತ್ ರಾಜ್ ಕುಮಾರ್ ಕುಟುಂಬ ಸದಸ್ಯರು ಕಂಠೀರವ ಸ್ಟುಡಿಯೋದಲ್ಲಿರುವ ಸಮಾಧಿಕ ಭೇಟಿ ನೀಡಿ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.ಕಳೆದ 9 ತಿಂಗಳಿನಿಂದ ಪ್ರತಿ ನಿತ್ಯವೂ ಪುನೀತ್ ಕುಟುಂಬ ಅಪ್ಪು ಸಮಾಧಿಗೆ ಪೂಜೆ ಸಲ್ಲಿಸುತ್ತ ಬಂದಿದೆ. ಪುನೀತ್ ಅಗಲಿ 9 ತಿಂಗಳು ಕಳೆದಿರೋ ಹಿನ್ನೆಲೆಯಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ವಿನಯ್ ರಾಜ್ ಕುಮಾರ್, ಧೀರನ್ ಹಾಗೂ ಕುಟುಂಬದ ಹಲವು ಸದಸ್ಯರು ಪೂಜಾ ಕಾರ್ಯದಲ್ಲಿ ಭಾಗಿಯಾಗಿದ್ದರು. ಅಪ್ಪು ಅವರ ಇಷ್ಟ ಪಡುತ್ತಿದ್ದ ಹಲವು ತಿಂಡಿ, ತಿನಿಸುಗಳನ್ನಿಟ್ಟು ಪೂಜೆ ಸಲ್ಲಿಸಿದ್ದು ಈ ವೇಳೆ ಸಾಕಷ್ಟು ಅಭಿಮಾನಿಗಳು ಕೂಡ ಹಾಜರಿದ್ದರು. ಒಂಬತ್ತು ತಿಂಗಳ ಪೂಜೆಗಾಗಿ ಅಪ್ಪು ಸಮಾಧಿಯನ್ನು ವಿಶೇಷ ಹೂವುಗಳಿಂದ ಅಲಂಕರಿಸಲಾಗಿತ್ತು. ಜೊತೆ ಡಾ.ರಾಜ್ ಕುಮಾರ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಸಮಾಧಿಗೂ ಕೂಡ ಪೂಜೆ ಸಲ್ಲಿಸಲಾಯಿತು.  

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now