• March 14, 2026

ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಕೈ ಹಿಡಿದ ನಟಿ, ನಿರೂಪಕಿ ಮಹಾಲಕ್ಷ್ಮೀ

ತಮಿಳು ಚಿತ್ರರಂಗದಲ್ಲಿ ನಟಿ ಹಾಗೂ ನಿರೂಪಕಿಯಾಗಿ ಖ್ಯಾತಿ ಘಳಿಸಿರುವ ಮಹಾಲಕ್ಷ್ಮೀ ಮತ್ತು ಖ್ಯಾತ ನಿರ್ಮಾಪಕ ರವೀಂದರ್‌ ಚಂದ್ರಶೇಖರನ್‌ ಗುರು ಹಿರಿಯರ ಸಮ್ಮುಖದಲ್ಲಿ ಹಸೆಮಣೆ ಏರಿದ್ದಾರೆ. ತಿರುಪತಿಯ ತಿಮ್ಮಪ್ಪನ ಸನ್ನಿಧಿಯಲ್ಲಿ ಮಹಾಲಕ್ಷ್ಮೀ ಹಾಗೂ ರವೀಂದರ್‌ ಚಂದ್ರಶೇಖರನ್‌ ಹೊಸ ಬಾಳಿಗೆ ಅಡಿ ಇಟ್ಟಿದ್ದು ಸಿನಿಮಾ ರಂಗದ ಗಣ್ಯರು, ಅಭಿಮಾನಿಗಳು ಸೇರಿದಂತೆ ಸಾಕಷ್ಟು ಮಂದಿ ನವ ಜೋಡಿಗಳಿಗೆ ಶುಭ ಹಾರೈಸಿದ್ದಾರೆ. ಸದ್ಯ ವಿವಾಹ ಬಂಧನಕ್ಕೆ ಒಳಗಾಗಿರುವ ಮಹಾಲಕ್ಷ್ಮೀ ಹಾಗ ರವೀಂದರ್ ಮದುವೆಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇವರಿಬ್ಬರಿಗೂ ಇದು ಎರಡನೇ ಮದುವೆ. ಮಹಾಲಕ್ಷ್ಮೀ ನಿರೂಪಣೆಯ ಜೊತೆಗೆ ನಟಿಯಾಗಿಯೂ ಹೆಸರು ಮಾಡಿದ್ದರು. ರವೀಂದರ್‌ ಚಂದ್ರಶೇಖರ್ ನಿರ್ಮಿಸಿದ್ದ ‘ವಿಡಿಯುಮ್‌ ವಾರೈ ಕಾಥಿರು’ ಸಿನಿಮಾದಲ್ಲಿ ಮಹಾಲಕ್ಷ್ಮೀ ನಟಿಸಿದ್ದರು. ಆ ಸಿನಿಮಾದಲ್ಲಿ ವಿದಾರ್ಥ್‌ ಮತ್ತು ವಿಕ್ರಾಂತ್ ಮುಖ್ಯಭೂಮಿಕೆಯಲ್ಲಿದ್ದರು. ಧಾರಾವಾಹಿ ಕ್ಷೇತ್ರದಲ್ಲೂ ಮಹಾಲಕ್ಷ್ಮೀ ಹೆಸರು ಮಾಡಿದ್ದಾರೆ. ವಾಣಿ ರಾಣಿ, ಆಫೀಸ್‌, ಚೆಲ್ಲಮೇ, ಉಥಿರಿಪೂಕ್ಕಳ್, ಒರು ಕೈ ಒಸೈ ಸೇರಿದಂತೆ ಸಾಕಷ್ಟು ಧಾರಾವಾಹಿಗಳಲ್ಲಿ ಮಹಾಲಕ್ಷ್ಮೀ ನಟಿಸಿದ್ದಾರೆ. ಸದ್ಯ ಮಹಾಲಕ್ಷ್ಮೀ ನಟಿಸಿರುವ ಮಹಾರಸಿ ಎಂಬ ಧಾರಾವಾಹಿ ಪ್ರಸಾರವಾಗುತ್ತಿದೆ. ರವೀಂದರ್‌ ಚಂದ್ರಶೇಖರನ್‌ ತಮ್ಮದೆ ಲಿಬ್ರಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ `ನಟ್ಪುನ ಎನ್ನಡು ಥೆರಿಯುಮ’, ‘ಮುರುಂಗೈಕೈ ಚಿಪ್ಸ್’, ‘ವಿಡಿಯುಮ್‌ ವಾರೈ ಕಾಥಿರು’ ಮುಂತಾದ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ನವ ಜೋಡಿಗಳು ತಮ್ಮ ಮದುವೆಯ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದರೊಂದಿಗೆ ಮಹಾಲಕ್ಷ್ಮೀ ಅವರು, ‘ನಿಮ್ಮನ್ನು ನನ್ನ ಬದುಕಿನಲ್ಲಿ ಪಡೆಯಲು ನಾನು ತುಂಬ ಅದೃಷ್ಟ ಮಾಡಿದ್ದೇನೆ. ಬೆಚ್ಚನೆಯ ಪ್ರೀತಿಯಿಂದ ನೀವು ನನ್ನ ಬದುಕನ್ನು ಪರಿಪೂರ್ಣಗೊಳಿಸಿದ್ದೀರಿ. ಲವ್ ಯೂ ಅಮ್ಮು..’ ಎಂದು ಬರೆದುಕೊಂಡಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now