ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಮತ್ತೆ ಬಿಗಡಾಯಿಸಿದ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಆರೋಗ್ಯ
ಕಿಶೋರ್ ಅವರು ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆದರೂ, ಕೆಲ ತಿಂಗಳುಗಳ ಕಾಲ ಅವರು ಹಲವು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಎಂದೂ ವೈದ್ಯರು ಹೇಳಿದ್ದಾರೆ. ‘ಲೆಫ್ಟ್ ಬ್ರೈನ್ ಆಗಿರೋದ್ರಿಂದ ಮಾತನಾಡೋದಕ್ಕೆ ಸ್ವಲ್ಪ ಸಮಯವಾಗಬಹುದು. ಫಿಸಿಯೋತೆರಪಿ ಮಾಡಸಿಕೊಂಡರೆ ಸರಿ ಹೋಗುತ್ತದೆ. ಸ್ಟ್ರೋಕ್ ನಿಂದ ರೈಟ್ ಸೈಡ್ ಸ್ವಲ್ಪ ಸ್ವಾಧೀನ ಕಳೆದುಕೊಂಡಿದ್ದಾರೆ. ಈಗಲೂ ಕೂಡ ಸ್ವಲ್ಪ ಅವರ ಆರೋಗ್ಯ ಸ್ಥಿತಿ ಗಂಭೀರವೆ ಇದೇ. ಇನ್ನೂ ಒಂದು ವಾರ ಐಸಿಯುನಲ್ಲೇ ಚಿಕಿತ್ಸೆ ಮುಂದುವರೆಯಲಿದೆ’ ಎಂದಿದ್ದಾರೆ ವೈದ್ಯರು. ಈಗಾಗಲೇ ಅಶ್ವಿನಿ ಪುನೀತ್ ರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ಕಿಶೋರ್ ಆರೋಗ್ಯ ವಿಚಾರಿಸಿದ್ದಾರೆ.
