ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಬಾಲಿವುಡ್ ನ ಖ್ಯಾತ ನಿರ್ದೇಶಕ, ನಿರ್ಮಾಪಕ ಸಾವನ್ ಕುಮಾರ್ ನಿಧನ
ಸಾವನ್ ನಿಧನದ ಕುರಿತು ಸೋದರಳಿಗೆ ನವೀನ್ ತಿಳಿಸಿದ್ದು, ‘ಸಾವನ್ ಇಂದು ಸಂಜೆ ನಿಧನ ಹೊಂದಿದ್ದಾರೆ. ಅವರ ಹೃದಯ ಕೆಲಸ ಮಾಡುವುದು ನಿಲ್ಲಿಸಿದೆ’ ಎಂದಿದ್ದಾರೆ.
1967ರಲ್ಲಿ ನಿರ್ಮಾಪಕರಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಸಾವನ್, ‘ನೌನಿಹಾಲ್’ ‘ಗೋಮ್ಟಿ ಕೆ ಕಿನಾರೆ’ ‘ಸೌತನ್’ ಸೇರಿದಂತೆ ಸಾಕಷ್ಟು ಸಿನಿಮಾಗಳನ್ನು ನಿರ್ದೇಶನ ಹಾಗೂ ನಿರ್ಮಾಣ ಮಾಡಿದ್ದರು. ನಟ ಸಲ್ಮಾನ್ ಖಾನ್ ಜೊತೆ ಉತ್ತಮ ಬಾಂದವ್ಯ ಹೊಂದಿದ್ದ ಸಾವನ್ ಸಲ್ಲು ಜೊತೆ ‘ಸನಮ್ ಬೇವಫಾ’ ‘ಚಾಂದ್ ಕಾ ತುಕ್ಡಾ’ ಹಾಗೂ ‘ಸಾವನ್’ ಚಿತ್ರಗಳನ್ನು ಮಾಡಿದ್ದರು.
ಸಿನಿಮಾ ನಿರ್ದೇಶನ ಹಾಗೂ ನಿರ್ಮಾಣದ ಜೊತೆಗೆ ಗೀತಾ ಸಾಹಿತಿ ಆಗಿಯೂ ಸಾವನ್ ಹೆಸರು ಮಾಡಿದ್ದರು. ಸಾವನ್ ನಿಧನಕ್ಕೆ ಬಾಲಿವುಡ್ ನ ಅನೇಕರು ಕಂಬನಿ ಮಿಡಿದಿದ್ದಾರೆ.
