ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಚೇತನ್ ಪಕ್ಕಾ ಕಮ್ಯೂನಿಸ್ಟ್ ವಾದಿ ಬುದ್ಧಿಜೀವಿ: ಪ್ರಮೋದ್ ಮುತಾಲಿಕ್
ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಮೋದ್ ಮುತಾಲಿಕ್, ಚೇತನ್‌ಗೆ ಇಲ್ಲಿನ ಮಣ್ಣಿನ ಗುಣ ಹಾಗೂ ಇಲ್ಲಿನ ಸೊಗಡು ಗೊತ್ತಿಲ್ಲ. ಅವರು ಹುಟ್ಟಿದ್ದು ಎಲ್ಲೋ, ಬೆಳೆದಿದ್ದೂ ಎಲ್ಲೋ? ಈಗ ಇಲ್ಲಿಗೆ ನಟ ಎಂದು ಹೇಳಿಕೊಂಡು ಬಂದು ಪ್ರವೇಶ ಮಾಡಿದ್ದಾರೆ. ಅವರೊಬ್ಬ ನಾಸ್ತಿಕವಾದಿ, ಪಕ್ಕಾ ಕಮ್ಯೂನಿಸ್ಟ್‌ವಾದಿ ಬುದ್ಧಿಜೀವಿ. ಈ ದೇಶದ ಸಂಸ್ಕೃತಿ ಅವಹೇಳನ ಮಾಡುವುದೇ ಬುದ್ಧಿಜೀವಿಗಳ ಕುಕೃತ್ಯ. ಅದರಲ್ಲಿ ಚೇತನ್ ಸಹ ಒಬ್ಬರು. ಭೂತದಕೋಲ ಹಿಂದೂಗಳದ್ದಲ್ಲ ಅಂತ ಹೇಳಿದ್ದಾರೆ, ಅದು ಮೂರ್ಖತನದ ಹೇಳಿಕೆ, ಅದನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಕಾಂತಾರ ಸಿನಿಮಾದ ಕುರಿತು ಟ್ವೀಟರ್ ಖಾತೆಯಲ್ಲಿ ಬರೆದುಕೊಂಡಿದ್ದ ನಟ ಚೇತನ್ ಕುಮಾರ್, ನಮ್ಮ ಕನ್ನಡದ ಚಲನಚಿತ್ರ `ಕಾಂತಾರ’ವು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಖುಷಿಯ ಸಂಗತಿ. ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂದು ನಿರ್ದೇಶಕ ರಿಷಬ್ ಶೆಟ್ಟಿಯವರು ಹೇಳಿದ್ದಾರೆ. ಇದು ನಿಜವಲ್ಲ. ನಮ್ಮ ಪಂಬದ, ನಲಿಕೆ, ಪರವರ ಬಹುಜನ ಸಂಪ್ರದಾಯಗಳು, ವೈದಿಕ-ಬ್ರಾಹ್ಮಣ್ಯದ ಹಿಂದೂ ಧರ್ಮಕ್ಕಿಂತ ಹಿಂದಿನವು. ಮೂಲನಿವಾಸಿ ಸಂಸ್ಕೃತಿಗಳನ್ನು ಪರದೆಯ ಮೇಲೆಯಾಗಲಿ, ಅದರಾಚೆಯಾಗಲಿ, ಸತ್ಯ ಸಂಗತಿಗಳೊಂದಿಗೆ ತೋರಿಸಬೇಕೆಂದು ನಾವು ಕೇಳುತ್ತೇವೆ ಎಂದು ತಮ್ಮ ಬರೆದುಕೊಂಡಿದ್ದರು.
