• March 14, 2026

ಬರ್ಬರವಾಗಿ ಕೊಲೆಯಾದ ಯುವ ನಟ ಸತೀಶ್ ವಜ್ರ ಮನೆಗೆ ಭೇಟಿ ನೀಡಿ ಪೋಷಕರಿಗೆ ಧೈರ್ಯ ತುಂಬಿದ ಪ್ರಜ್ವಲ್ ದೇವರಾಜ್

ಕಳೆದ ಜೂನ್ ತಿಂಗಳಲ್ಲಿ ಬಾಮೈದುನನಿಂದಲೇ ಬರ್ಬರವಾಗಿ ಕೊಲೆಯಾದ ಯುವ ನಟ ಸತೀಶ್ ವಜ್ರ ಮನೆಗೆ ನಟ ಪ್ರಜ್ವಲ್ ದೇವರಾಜ್ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಿದ್ದಾರೆ. ಅಲ್ಲದೆ ತಮ್ಮ ಕೈಲಾದಷ್ಟು ಹಣದ ನೆರವು ನೀಡಿ ಸತೀಶ್ ಪೋಷಕರಿಗೆ ದೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಲಂಗೋರಿ ಎಂಬ ಟೆಲಿಫಿಲ್ಮ್ ನಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದ ಸತೀಶ್ ವಜ್ರ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಳ್ಳಬೇಕು ಎಂದುಕೊಳ್ಳುವಷ್ಟರಲ್ಲೇ ಅವರನ್ನು ಅವರ ಮನೆಯಲ್ಲೇ ಕೊಲೆ ಮಾಡಲಾಗಿತ್ತು. ನಟ ಪ್ರಜ್ವಲ್ ದೇವರಾಜ್ ರ ಪಕ್ಕ ಅಭಿಮಾನಿಯಾಗಿದ್ದ ಸತೀಶ್ ವಜ್ರ ಮನೆಯ ತುಂಬೆಲ್ಲಾ ಪ್ರಜ್ವಲ್ ಜೊತೆ ತೆಗೆಸಿಕೊಂಡಿದ್ದ ಫೋಟೋಗಳನ್ನು ಪ್ರೇಮ್ ಹಾಕಿಸಿಟ್ಟುಕೊಂಡಿದ್ದರು. ಇದೀಗ ಪ್ರಜ್ವಲ್ ದೇವರಾಜ್ ಸತೀಶ್ ಮನೆಗೆ ಭೇಟಿ ನೀಡಿ ಆತನ ಪೋಷಕರಿಗೆ ಸಾಂತ್ವನ ಹೇಳಿ ದೈರ್ಯ ತುಂಬಿದ್ದಾರೆ. ಸೆಪ್ಟೆಂಬರ್ 14ರ ರಾತ್ರಿ ಸತೀಶ್ ವಜ್ರ ಮನೆಗೆ ಪ್ರಜ್ವಲ್ ದೇವರಾಜ್ ಭೇಟಿ ನೀಡಿರುವ ಫೋಟೋ ಹಾಗೂ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೆ ವಿಡಿಯೋದಲ್ಲಿ ಪ್ರಜ್ವಲ್ ಸತೀಶ್ ತಾಯಿಯ ಹಣದ ನೀಡಿ ದೈರ್ಯ ತುಂಬುತ್ತಿರುವ ದೃಶ್ಯವಿದೆ. ನೀವು ಧೈರ್ಯದಿಂದಿರಿ. ನೀವೇ ಧೈರ್ಯ ಕಳೆದುಕೊಂಡರೆ ಇವರ ಗತಿ ಏನು ಎಂದು ಸತೀಶ್ ತಾಯಿಗೆ ಧೈರ್ಯ ಹೇಳಿದ್ದಾರೆ. ಪ್ರಜ್ವಲ್ ನಡೆಗೆ ಅಭಿಮಾನಿಗಳು ಶಹಭಾಷ್ ಎಂದಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now