• March 18, 2026

ಎರಡನೇ ಭಾರಿ ಕಾಂತಾರ ವೀಕ್ಷಿಸಿ ಅನುಭವ ಹಂಚಿಕೊಂಡ ನಟ ಪ್ರಭಾಸ್

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಭರ್ಜರಿ ಸದ್ದು ಮಾಡುತ್ತಿದೆ. ಸಿನಿಮಾ ರಿಲೀಸ್ ಆಗಿ ಮೂರು ವಾರ ಹತ್ತಿರವಾಗುತ್ತಿದೆ. ಆದರೆ ಇಂದಿಗೂ ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಪ್ರತಿಯೊಂದು ಭಾಷೆಯಲ್ಲೂ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿರುವ ಕಾಂತಾರ ಚಿತ್ರವನ್ನು ನಟ ಪ್ರಭಾಸ್ ಎರಡನೇ ಭಾರಿ ವೀಕ್ಷಿಸಿದ್ದಾರೆ. ಈಗಾಗ್ಲೆ ಕನ್ನಡ ವರ್ಷನ್ ಕಾಂತಾರ ನೋಡಿದ್ದ ಪ್ರಭಾಸ್ ಇದೀಗ ತೆಲುಗಿನಲ್ಲಿಯೂ ವೀಕ್ಷಿಸಿದ್ದಾರೆ. ಜೊತೆಗೆ ಈ ಬಗ್ಗೆ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಎರಡನೇ ಸಲ ಕಾಂತಾರ ವೀಕ್ಷಿಸಿದ್ದು ಇದೊಂದು ಅತ್ಯದ್ಭುತ ಅನುಭವವಾಗಿದೆ. ಈ ಚಿತ್ರ ನೋಡುವುದನ್ನು ಮಿಸ್ ಮಾಡಿಕೊಳ್ಳಬೇಡಿ ಎಂದಿದ್ದಾರೆ. ಇನ್ನು ಕಾಂತಾರ ಚಿತ್ರವನ್ನು ಸಂಸದ ಪ್ರತಾಪ್ ಸಿಂಹ ಕೂಡ ವೀಕ್ಷಿಸಿದ್ದಾರೆ. ಈ ಬಗ್ಗೆ ಬರೆದುಕೊಂಡಿರುವ ಪ್ರತಾಪ್ ಸಿಂಹ, ‘ತಡವಾಗಿ ಚಿತ್ರ ವೀಕ್ಷಿಸಿದ್ದೇನೆ, ಆದರೆ ನೀವು ತಡಮಾಡಬೇಡಿ ಈಗಲೇ ಸಿನಿಮಾ ನೋಡಿ ಎಂದಿದ್ದಾರೆ. ಅ.30ರಂದು ಬಿಡುಗಡೆ ಆದ ಕಾಂತಾರ ಸಿನಿಮಾ ಎಲ್ಲಡೆ ವ್ಯಾಪಕ ಮೆಚ್ಚುಗೆ ವ್ಯಕ್ತವಾದ ಬಳಿಕ ಇದೀಗ ಪರಭಾಷೆಗೂ ಡಬ್ಬಿಂಗ್ ಆಗಿದೆ. ಕನ್ನಡದಲ್ಲಿ ಬಿಡುಗಡೆ ಆದ ಕಾಂತಾರ ಇದೀಗ ಪ್ಯಾನ್ ಇಂಡಿಯಾ ಸಿನಿಮಾವಾಗಿ ಸದ್ದು ಮಾಡಿತ್ತಿದೆ. ನಿನ್ನೆ (ಅ.14) ಕಾಂತಾರ ಹಿಂದಿ ಅವತರಣಿಗೆ ಬಿಡುಗಡೆ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಂದು (ಅ. 15) ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಕಾಂತಾರ ಬಿಡುಗಡೆ ಆಗುತ್ತಿದ್ದು, ಅಕ್ಟೋಬರ್ 20ರಂದು ಮಲಯಾಳಂನಲ್ಲಿ ಬಿಡುಗಡೆಗೊಳ್ಳಲಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now