• March 16, 2026

ಕಿಚ್ಚ ಸುದೀಪ್ ಅವರ ವಿಶೇಷ ಅಂಚೆ ಲಕೋಟೆ ಬಿಡುಗಡೆಗೆ ಸಿದ್ಧತೆ

ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಸದ್ಯ ಗಣೇಶ ಹಬ್ಬದ ಸಂಭ್ರಮದಲ್ಲಿರುವ ಕಿಚ್ಚನ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಕೇಳಿ ಬಂದಿದೆ. ಭಾರತೀಯ ಅಂಚೆ ಇಲಾಖೆಯು ಕಿಚ್ಚ ಸುದೀಪ್ ಅವರ “ವಿಶೇಷ ಅಂಚೆ ಲಕೋಟೆ” ಯನ್ನು ಹೊರ ತರುತ್ತಿದೆ. ಈ ಹಿಂದೆ ಡಾ.ವಿಷ್ಣುವರ್ಧನ್ ಅವರ ಅಂಚೆ ಲಕೋಟೆ ತರಲು ಶ್ರಮಿಸಿದ್ದ ಡಾ.ವಿಷ್ಣು ಸೇನಾಸಮಿತಿಯ ವೀರಕಪುತ್ರ ಶ್ರೀನಿವಾಸ್ ಅವರೇ, ಇದೀಗ ಸುದೀಪ್ ಅಂಚೆ ಲಕೋಟೆಯನ್ನು ಹೊರ ತರಲು ಶ್ರಮಿಸಿದ್ದಾರೆ. ಭಾರತ ಸರ್ಕಾರದ ಅಂಚೆ ಇಲಾಖೆಯು ದೇಶದ ಮಹತ್ತರ ಘಟನೆಗಳನ್ನು, ಪ್ರಶಸ್ತಿಗಳನ್ನು ಅಥವಾ ವ್ಯಕ್ತಿಗಳ ಸಾಧನೆಗಳನ್ನು ನೂರಾರು ವರ್ಷ ದಾಖಲೆಯಾಗಿ ಉಳಿಸಬೇಕೆಂಬ ಕಾರಣಕ್ಕೆ   “ವಿಶೇಷ ಅಂಚೆ ಲಕೋಟೆಯನ್ನು ” ಬಿಡುಗಡೆ ಮಾಡುತ್ತದೆ. ಇದೀಗ ಸುದೀಪ್ ಅವರ ವಿಶೇಷ ಅಂಚೆ ಲಕೋಟೆ ಬಿಡುಗಡೆ ಆಗುತ್ತಿರುವ ಕಾರಣಕ್ಕೆ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಸುದೀಪ್ ಅವರ ಸಿನಿಮಾ ಜರ್ನಿಗೆ 25 ವರ್ಷ ಕಳೆದಿರುವ ಹಿನ್ನೆಲೆಯಲ್ಲಿ ಸುದೀಪ್ ಸಾಧನೆಯನ್ನು ಭಾರತೀಯ ಅಂಚೆ ಇಲಾಖೆ ದಾಖಲೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಅಂಚೆ ಇಲಾಖೆಯ ಅಧೀಕ್ಷರಾದ ಶ್ರೀ ಮಾದೇಶ್ ಅವರು ಕಿಚ್ಚ ಸುದೀಪ್ ಅವರ ಮನೆಗೆ ಭೇಟಿ ನೀಡಿ NOC ಪಡೆದಿದ್ದಾರೆ. ಜೊತೆಗೆ ಬಿಡುಗಡೆ ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಆಹ್ವಾನಿಸಿದರು. ಈ ವಿಶೇಷ ಅಂಚೆ ಲಕೋಟೆಯ ಬಿಡುಗಡೆ ಸಮಾರಂಭವು ಶೀಘ್ರದಲ್ಲೇ ನಡೆಯಲಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now