ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಸತತ ಸೋಲುಗಳ ಬಳಿಕ ಸರ್ಜರಿಗೆ ಮುಂದಾದ ನಟಿ ಪೂಜಾ ಹೆಗ್ಡೆ
ಪ್ರತಿಭೆಯ ಜೊತೆಗೆ ಬ್ಯೂಟಿಯನ್ನು ಹೊದ್ದು ಬಂದಿದ್ದ ಪೂಜಾಗೆ ಇತ್ತೀಚೆಗೆ ಲಕ್ ಕೈ ಕೊಟ್ಟಿದೆ. ಆಕೆಯ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಗಲುತ್ತಿವೆ. ಹೀಗಾಗಿ ಸಾಲು ಸಾಲು ಸಿನಿಮಾಗಳ ಸೋಲಿನ ಬಳಿಕ ಪೂಜಾ ಇದೀಗ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ.
ಈಗಾಗ್ಲೆ ಸಾಕಷ್ಟು ನಟಿಯರು ಶಸ್ತ್ರ ಚಿಕಿತ್ಸೆಯ ಮೂಲಕ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಂಡಿದ್ದಾರೆ. ಕೆಲ ನಟಿಯರು ಸಾಕಷ್ಟು ಶಸ್ತ್ರ ಚಿಕಿತ್ಸೆಯನ್ನು ಮಾಡಿಸಿಕೊಂಡಿದ್ದಾರೆ, ಇದೀಗ ನಟಿ ಪೂಜಾ ಹೆಗ್ಡೆ ಕೂಡ ತಮ್ಮ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಶಸ್ತ್ರಚಿಕಿತ್ಸೆಯ ಮೊರೆ ಹೋಗುತ್ತಿದ್ದಾರೆ.
ನಟಿ ಪೂಜಾ ಹೆಗ್ಡೆ ಮೂಗಿನ ಸರ್ಜರಿ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ. ಈಗಾಗ್ಲೆ ನಟಿಯರಾದ ಪ್ರಿಯಾಂಕ ಚೋಪ್ರಾ, ಶ್ರೀದೇವಿ, ಐಶ್ವರ್ಯ ರೈ ಬಚ್ಚನ್, ಪ್ರೀತಿ ಜಿಂಟಾ, ಅನುಷ್ಕಾ ಶರ್ಮಾ, ಕರೀನಾ ಕಪೂರ್, ನಯನತಾರಾ ಸೇರಿದಂತೆ ಸಾಕಷ್ಟು ನಟಿಯರು ತಮ್ಮ ಮೂಗಿನ ಸರ್ಜರಿ ಮಾಡಿಸಿಕೊಂಡಿದ್ದಾರೆ. ಇದೀಗ ಪೂಜಾ ಹೆಗ್ಡೆ ಕೂಡ ಮೂಗಿನ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು ಮುಂದಾಗಿದ್ದು ಈ ಮೂಲಕವಾದ್ರು ಪೂಜಾಗೆ ಅದೃಷ್ಟ ಕುಲಾಯಿಸುತ್ತಾ ಕಾದು ನೋಡಬೇಕಿದೆ.
