• March 14, 2026

ಯಶ್ ಸಿನಿಮಾದಲ್ಲಿ ನಟಿಸುವ ಬಗ್ಗೆ ಪೂಜಾ ಹೆಗ್ಡೆ ಹೇಳಿದ್ದೇನು ಗೊತ್ತಾ?

ಕೆಜಿಎಫ್ ಸಿನಿಮಾದ ಬಳಿಕ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಕೆಜಿಎಫ್ ಸೂಪರ್ ಸಕ್ಸಸ್ ಬಳಿಕ ಯಶ್ ನಟನೆಯ ಮುಂದಿನ ಸಿನಿಮಾದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಈ ಮಧ್ಯೆ ಯಶ್ ನಟನೆಯ ಮುಂದಿನ ಸಿನಿಮಾಗೆ ನಟಿ ಪೂಜಾ ಹೆಗ್ಡೆ ನಾಯಕಿ ಎನ್ನಲಾಗುತ್ತಿದ್ದು ಈ ಬಗ್ಗೆ ಪೂಜಾ ಹೆಗ್ಡೆ ಪ್ರತಿಕ್ರಿಯೆ ನೀಡಿದ್ದಾರೆ. ಕಳೆದ ಶನಿವಾರ ಹಾಗೂ ಭಾನುವಾರ ಬೆಂಗಳೂರಿನಲ್ಲಿ 2022ರ ಸೈಮಾ ಅವಾರ್ಡ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮೊದಲ ದಿನವಾದ ಶನಿವಾರ ಕನ್ನಡ ಹಾಗೂ ತೆಲುಗು ಸಿನಿಮಾಗಳಿಗೆ ಅವಾರ್ಡ್ ನೀಡಲಾಯಿತು. ಎರಡನೇ ದಿನವಾದ ಭಾನುವಾರ ತಮಿಳು ಹಾಗೂ ಮಲಯಾಳ ಸಿನಿಮಾಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಈ ವೇಳೆ ಕಾರ್ಯಕ್ರಮದಲ್ಲಿ ಯಶ್ ಹಾಗೂ ಪೂಜಾ ಹೆಗ್ಡೆ ಇಬ್ಬರು ಭಾಗಿಯಾಗಿದ್ದರು. ಯಶ್ ನಟನೆಯ ಮುಂದಿನ ಸಿನಿಮಾದ ನಾಯಕಿಯಾಗಿ ನಟಿಸುತ್ತಿದ್ದೀರಾ ಎಂಬ ಪ್ರಶ್ನೆಗೆ ಪೂಜೆ ಐಡಿಯಾ ಇಲ್ಲ ಎಂಬಂತೆ ಕೈ ಸನ್ನೆ ಮಾಡಿದ್ದಾರೆ. ಪೂಜಾ ಸೈಲೆಂಟ್ ಆಗಿರುವುದನ್ನು ನೋಡಿದ ಕೆಲವರು ಗುಟ್ಟು ಬಿಟ್ಟು ಕೊಡಬಾರದು ಅನ್ನೋ ಕಾರಣಕ್ಕೆ ಸೈಲೆಂಟ್ ಆಗಿದ್ದಾರೆ ಎನ್ನುತ್ತಿದ್ದಾರೆ. ಮತ್ತೊಂದಷ್ಟು ಮಂದಿ ಪೂಜಾ ರಿಯಾಕ್ಷನ್ ನೋಡಿ ಈಕೆಯನ್ನು ಬಿಟ್ಟು ಬೇರೆ ಯಾರು ಯಶ್ ಗೆ ನಾಯಕಿಯಾಗ್ತಾರೆ ಎಂಬ ಗೊಂದಲಕ್ಕೆ ಬಿದಿದ್ದಾರೆ. ಜೊತೆಗೆ ಕನ್ನಡದಲ್ಲಿ ಏನಾದರೂ ಮಾಡಬೇಕು ಎಂಬ ಆಸೆ ಇದೆ ಎಂದು ಪೂಜಾ ಹೇಳಿದ್ದು ಈಕೆ ಯಶ್ ಜೊತೆ ನಟಿಸ್ತಾರೆ ಅನ್ನೋದು ಕೊಂಚ ಮಟ್ಟಿಗೆ ನಿಜವಾಗಿದೆ. ಸೈಮಾ 2022 ಕಾರ್ಯಕ್ರಮದಲ್ಲಿ ಪೂಜಾ ಹೆಗ್ಡೆ ಎರಡೆರಡು ಅವಾರ್ಡ್ ಮುಡಿಗೇರಿಸಿಕೊಂಡಿದ್ದಾರೆ. ಅಖಿಲ್ ಅಕ್ಕಿನೇನಿ ನಟನೆಯ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಚಿತ್ರದ ನಟನೆಗೆ ಅತ್ಯುತ್ತಮ ನಾಯಕ ನಟಿ ಹಾಗೂ ಸೂಮಾ ವಿಶೇಷವಾಗಿ ನೀಡುವ ಫಿಮೇಲ್ ಯೂತ್ ಐಕಾನ್ ಪ್ರಶಸ್ತಿ ಕೂಡ ಪೂಜಾ ಹೆಗ್ಡೆ ಪಾಲಾಗಿದೆ. ಪೂಜಾ ಹೆಗ್ಡೆಗೆ ಅವಾರ್ಡ್ ಬರ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಆಕೆಯ ಕುರಿತಾಗಿ ಗಂಭೀರ ಆರೋಪ ಕೇಳಿ ಬಂದಿದೆ. ಶ್ಯಾಮ್ ಸಿಂಗ್ ರಾಯ್ ಸಿನಿಮಾದ ನಟನೆಗೆ ನಾಯಕಿ ಸಾಯಿ ಪಲ್ಲವಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಬರಬೇಕಿತ್ತು.ಜೊತೆಗೆ ಫೀಮೇಲ್ ಯುತ್ ಐಕಾನ್ ಪ್ರಶಸ್ತಿ ಕೂಡ ಸಾಯಿ ಪಲ್ಲವಿಗೆ ಸೇರಬೇಕಿತ್ತು. ಆದರೆ ಇವೆರಡನ್ನು ಪೂಜಾ ದುಡ್ಡು ಕೊಟ್ಟು ಖರೀದಿಸಿದ್ದಾರೆ ಎನ್ನಲಾಗುತ್ತಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now