• March 14, 2026

ಪ್ರಕಾಶ್ ರಾಜ್ ಫಸ್ಟ್ ಲುಕ್ ಅನಾವರಣ ಮಾಡಿದ ಪೊನ್ನಿಯನ್ ಸೆಲ್ವನ್ ಚಿತ್ರತಂಡ

ತಮಿಳಿನ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ಪೊನ್ನಿಯನ್ ಸೆಲ್ವನ್ ಸಿನಿಮಾ ತಂಡ ಇದೀಗ ಹೊಸ ಲುಕ್ ಒಂದನ್ನು ಬಿಡುಗಡೆ ಮಾಡಿದೆ. ಪ್ರಕಾಶ್ ರಾಜ್, ಜಯಚಿತ್ರ ಹಾಗೂ ರೆಹಮಾನ್ ಅವರ ಫಸ್ಟ್ ಲುಕ್ ರಿಲೀಸ್ ಮಾಡಿದ್ದ ಅಭಿಮಾನಿಗಳು ಸಂತಸಗೊಂಡಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೊನ್ನಿಯನ್ ಸೆಲ್ವನ್ ಸಿನಿಮಾದ ಮೋಷನ್ ಪೋಸ್ಟರ್ ಶೇರ್ ಮಾಡಿದೆ. ಅಲ್ಲದೆ ಪ್ರಕಾಶ್ ರಾಜ್ ಅನ್ನು ಸುಂದ್ರ ಚೋಜರ್ ಎಂದು, ಜಯಚಿತ್ರವನ್ನು ಸೆಂಬಿಯನ್ ಮಾದೇವಿ ಎಂದು ಮತ್ತು ರೆಹಮಾನ್ ಅನ್ನು ಮಧುರಾಂತಕನ್ ಎಂದು ಪರಿಚಯ ಮಾಡಿಕೊಟ್ಟಿದೆ. ಪೋಸ್ಟ್ ನಲ್ಲಿ  “ಪ್ರತಿಯೊಂದು ಗುಲಾಬಿಗೂ ಅದರ ಮುಳ್ಳುಗಳಿವೆ. ಚಕ್ರವರ್ತಿ, ರಾಣಿ ತಾಯಿ ಮತ್ತು ಎಲ್ಲವನ್ನೂ ಬಯಸುವ ಮಗ! ಗ್ರ್ಯಾಂಡ್ ಆಡಿಯೊ ಮತ್ತು ಟ್ರೇಲರ್ ಬಿಡುಗಡೆಗೆ 2 ದಿನಗಳು” ಎಂದು ಬರೆಯಲಾಗಿದೆ. ‘ಬಾಹುಬಲಿ’, ‘ಆರ್‌ಆರ್‌ಆರ್‌’, ‘ಕೆಜಿಎಫ್’ ಬಳಿಕ ಭಾರತದಾದ್ಯಂತ ಬಹುನಿರೀಕ್ಷೆ ಮೂಡಿಸಿರುವ ‘ಪೊನ್ನಿಯಿನ್ ಸೆಲ್ವನ್ 1’ ಚಿತ್ರವನ್ನು ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನ ಮಾಡಿದ್ದಾರೆ. ಕಲ್ಕಿ ಕೃಷ್ಣಮೂರ್ತಿ ಬರೆದಿರುವ ‘ಪೊನ್ನಿಯಿನ್ ಸೆಲ್ವನ್’ ಎಂಬ ಐತಿಹಾಸಿಕ ಪುಸ್ತಕವನ್ನು ಆಧರಿಸಿ ‘ಪೊನ್ನಿಯಿನ್ ಸೆಲ್ವನ್ 1 ಸಿನಿಮಾ ತಯಾರಿಸಲಾಗುತ್ತಿದೆ. 9ನೇ ಶತಮಾನದಲ್ಲಿ ದಕ್ಷಿಣ ಭಾರತವನ್ನು ಆಳಿದ ರಾಜ ರಾಜ ಚೋಳನ ಜೀವನಗಾಥೆಯೇ ಕಥೆಯನ್ನು ಪೊನ್ನಿಯಲ್ ಸೆಲ್ವನ್ ಸಿನಿಮಾ ಹೊಂದಿದ್ದು , ಸುಮಾರು 500 ಕೋಟಿ ರೂಪಾಯಿ ಬಜೆಟ್‌ನಲ್ಲಿ ಚಿತ್ರ ನಿರ್ಮಿಸಲಾಗುತ್ತಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now