• March 17, 2026

ರಜನಿಕಾಂತ್ ನನ್ನ ಮಧ್ಯೆ ಅಸೂಯೆಗೆ ಜಾಗ ಇಲ್ಲ: ನಟ ಕಮಲ್ ಹಾಸನ್

ಮಣಿ ರತ್ನಂ ನಿರ್ದೇಶನದ ತಮಿಳಿನ ಬಹುನಿರೀಕ್ಷಿತ ಪೊನ್ನಿಯನ್ ಸೆಲ್ವನ್ ಸಿನಿಮಾ ಇದೇ ತಿಂಗಳ ಕೊನೆಯಲ್ಲಿ ಸಾಕಷ್ಟು ಅದ್ದೂರಿಯಾಗಿ ತೆರೆಗೆ ಬರಲಿದೆ. ಘಟಾನುಘಟಿ ಕಲಾವಿದರು ಚಿತ್ರದಲ್ಲಿ ಕಾಣಿಸಿಕೊಂಡಿದ್ದು ಸಿನಿಮಾದ ಕುರಿತಾಗಿ ಸಾಕಷ್ಟು ನಿರೀಕ್ಷೆ ಇದೆ. ಬಿಡುಗಡೆಗೆ ಎದುರು ನೋಡುತ್ತಿರುವ ಪೊನ್ನಿಯ್ ಸೆಲ್ವನ್ ಸಿನಿಮಾ ತಂಡ ಇತ್ತೀಚೆಗೆ ಅದ್ದರಿಯಾಗಿ ಕಾರ್ಯಕ್ರಮ ಆಯೋಜಿಸಿದೆ. ಮಣಿ ರತ್ನಂ ನಿರ್ದೇಶನದ ಪೊನ್ನೊಯನ್ ಸೆಲ್ವನ್ ಸಿನಿಮಾದಲ್ಲಿ ಐಶ್ವರ್ಯ ರೈ ಬಚ್ಚನ್, ಚಿಯನ್ ವಿಕ್ರಂ, ಜಯಂ ರವಿ, ತ್ರಿಷಾ, ಶೋಬಿತಾ ದೂಲಿಪಾಲ್, ಪ್ರಕಾಶ್ ರಾಜ್, ಕಾರ್ತಿ ಸೇರಿದಂತೆ ಸಾಕಷ್ಟು ಸ್ಟಾರ್ ಕಲಾವಿದರು ಬಣ್ಣ ಹಚ್ಚಿದ್ದಾರೆ. ಇದೇ ತಿಂಗಳ 30ರಂದು ಚಿತ್ರ ತೆರೆಗೆ ಬರಲಿದೆ. ಚಿತ್ರತಂಡ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಕಷ್ಟು ಹೈಲೈಟ್ ಆಗಿದ್ದು ರಜನಿಕಾಂತ್ ಹಾಗೂ ಕಮಲ್ ಹಾಸನ್ ಆಗಮನ. ತಮಿಳು ಚಿತ್ರರಂಗದ ಇಬ್ಬರು ಸ್ಟಾರ್ ನಟರು ಆಗಮಿಸಿದ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದರು. ಇದೇ ವೇಳೆ ಮಾತನಾಡಿದ ಕಮಲ್ ಹಾಸನ್, ನಾನು ರಜನಿಕಾಂತ್ 40 ವರ್ಷಗಳಿಂದ ಸ್ನೇಹಿತರು. ನಮ್ಮ ನಡುವೆ ಅಸೂಯೆಗೆ ಜಾಗವಿಲ್ಲ. ಸಿನಿಮಾ ಒಂದು ಕುಟುಂಬ, ಇಲ್ಲಿ ಅಸೂಯೆಗೆ ಜಾಗವಿಲ್ಲ ಎಂದಿದ್ದಾರೆ. 30 ವರ್ಷಗಳ ಹಿಂದೆಯೇ `ಪೊನ್ನಿಯನ್ ಸೆಲ್ವನ್’ ಚಿತ್ರವನ್ನು ಕಮಲ್ ಮತ್ತು ರಜನಿಕಾಂತ್ ಒಟ್ಟಿಗೆ ಮಾಡಲು ನಿರ್ಧರಿಸಲಾಗಿತ್ತು ಎಂಬ ವಿಚಾರ ಈ ಕಾರ್ಯಕ್ರಮದಲ್ಲಿ ನಲ್ಲಿ ಬಹಿರಂಗಪಡಿಸಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now