ಪ್ರಖ್ಯಾತ ಭಾರತೀಯ ನಟ, ಕಿಚ್ಚ ಸುದೀಪ್ ಅವರ ಸಹಯೋಗದೊಂದಿಗೆ ತನ್ನ ಸ್ಮಾರ್ಟ್ಸ್ಪೀಕರ್ಗಳಲ್ಲಿ ಮೊದಲ ಬಾರಿಗೆ ಸೆಲೆಬ್ರಿಟಿ ವಾಯ್ಸ್ ಫೀಚರ್ ಅನ್ನು ಬಿಡುಗಡೆ ಮಾಡುವುದಾಗಿ PhonePe ಇಂದು ಘೋಷಿಸಿತು. ಈ ಹೊಸ ಫೀಚರ್ನಿಂದ ಕರ್ನಾಟಕ ಚಲನಚಿತ್ರೋದ್ಯಮದ ಅಪ್ರತಿಮ ನಟ ಕಿಚ್ಚ ಸುದೀಪ್ ಅವರ ವಿಶಿಷ್ಠ ವಾಯ್ಸ್ನಲ್ಲಿ ಭಾರತದಾದ್ಯಂತ ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಗ್ರಾಹಕರ ಪಾವತಿಗಳನ್ನು ಮೌಲ್ಯೀಕರಿಸಲು PhonePe ಸ್ಮಾರ್ಟ್ಸ್ಪೀಕರ್ಗಳಿಗೆ ಸಾಧ್ಯವಾಗಿಸುತ್ತದೆ.
PhonePe ಸ್ಮಾರ್ಟ್ಸ್ಪೀಕರ್ ಅನ್ನು ಒಂದು ವರ್ಷದ ಹಿಂದೆ ಪ್ರಾರಂಭಿಸಲಾಯಿತು. ಅಂದಿನಿಂದ, ದೇಶದ 90% ಪೋಸ್ಟಲ್ ಕೋಡ್ಗಳಲ್ಲಿ ವ್ಯಾಪಾರಿ ಪಾಲುದಾರರು 4 ಮಿಲಿಯನ್ಗಿಂತಲೂ ಹೆಚ್ಚು ಸಾಧನಗಳನ್ನು ಬಳಸಿದ್ದಾರೆ. ಸರಾಸರಿ, PhonePe ಸ್ಮಾರ್ಟ್ಸ್ಪೀಕರ್ಗಳು ಕರ್ನಾಟಕದಲ್ಲಿ ತಿಂಗಳಿಗೆ 13.5 ಕೋಟಿ ವಹಿವಾಟುಗಳನ್ನು ಮೌಲ್ಯೀಕರಿಸುತ್ತವೆ. ಇದು ರಾಜ್ಯದಲ್ಲಿ ಅದರ ವ್ಯಾಪಕ ಅಳವಡಿಕೆಯನ್ನು ತೋರಿಸುತ್ತದೆ. ವಿವಿಧ ಪ್ರದೇಶಗಳ ಪ್ರಸಿದ್ಧ ಸೆಲೆಬ್ರಿಟಿ ವಾಯ್ಸ್ಗಳನ್ನು ಬಳಸುವುದರಿಂದ ಗ್ರಾಹಕರು ಮತ್ತು ವ್ಯಾಪಾರಿಗಳಿಗೆ ಪಾವತಿ ಅನುಭವವನ್ನು ಇನ್ನಷ್ಟು ಉತ್ತಮವಾಗಿಸಲು ಸಾಧ್ಯವಾಗುತ್ತದೆ.
ಈ ಹೊಸ ಮತ್ತು ವಿಶಿಷ್ಟ ಕೊಡುಗೆಯ ಕುರಿತು ಮಾತನಾಡಿದ,
PhonePe ನ ಮರ್ಚೆಂಟ್ ಬ್ಯುಸಿನೆಸ್ನ ಮುಖ್ಯ ವ್ಯಾಪಾರ ಅಧಿಕಾರಿ ಯುವರಾಜ್ ಸಿಂಗ್ ಶೆಖಾವತ್, “ನಮ್ಮ ವ್ಯಾಪಕವಾದ 3.7 ಕೋಟಿ ವ್ಯಾಪಾರಿಗಳ ನೆಟ್ವರ್ಕ್ ಭಾರತದ ವಿವಿಧ ಪ್ರದೇಶಗಳಲ್ಲಿ ಹರಡಿಕೊಂಡಿದೆ. ಪ್ರತಿಯೊಂದೂ ಪಾವತಿ ಮೌಲ್ಯೀಕರಣಕ್ಕಾಗಿ ಅದರ ವಿಶಿಷ್ಟ ಭಾಷಾ ಅಗತ್ಯಗಳನ್ನು ಹೊಂದಿದೆ. ವಿವಿಧ ಹೆಸರಾಂತ ಸೆಲೆಬ್ರಿಟಿಗಳೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುವ ಮೂಲಕ, ನಮ್ಮ ವ್ಯಾಪಾರಿಗಳ ವಿಭಿನ್ನ ಅಗತ್ಯಗಳನ್ನು ಸೃಜನಾತ್ಮಕ ರೀತಿಯಲ್ಲಿ ಪೂರೈಸಲು ನಾವು ನಮ್ಮ ಸೇವೆಗಳನ್ನು ಅಳವಡಿಸಿಕೊಳ್ಳುತ್ತಿದ್ದೇವೆ ಮತ್ತು ಸರಿಹೊಂದಿಸುತ್ತಿದ್ದೇವೆ. ಇದು ನಮ್ಮ ಸಾಧನಗಳ ಸಮರ್ಥ ಬಳಕೆಯನ್ನು ಖಚಿತಪಡಿಸುತ್ತದೆ ಮತ್ತು ವ್ಯಾಪಾರಿಗಳು ಮತ್ತು ಗ್ರಾಹಕರು PhonePe ಸ್ಮಾರ್ಟ್ಸ್ಪೀಕರ್ಗೆ ಆಕರ್ಷಿತರಾಗುವಂತೆ ಮಾಡುತ್ತದೆ” ಎಂದು ಹೇಳಿದರು.
ವ್ಯಾಪಾರಿಗಳು ತಮ್ಮ PhonePe for Business ಆ್ಯಪ್ನಿಂದ ಈ ಹೊಸ ಫೀಚರ್ ಅನ್ನು ಹೇಗೆ ಸಕ್ರಿಯಗೊಳಿಸಬಹುದು ಎಂಬುದರ ಕುರಿತ ಹಂತ-ಹಂತದ ಮಾರ್ಗದರ್ಶಿ ಇಲ್ಲಿದೆ.
1) PhonePe for Business ಆ್ಯಪ್ ಅನ್ನು ತೆರೆಯಿರಿ
2) ಮುಖಪುಟದಲ್ಲಿ ಸ್ಮಾರ್ಟ್ಸ್ಪೀಕರ್ ವಿಭಾಗಕ್ಕೆ ಹೋಗಿ
3) ‘ನನ್ನ ಸ್ಮಾರ್ಟ್ಸ್ಪೀಕರ್’ ಅಡಿಯಲ್ಲಿ, ‘ಸ್ಮಾರ್ಟ್ಸ್ಪೀಕರ್ ವಾಯ್ಸ್’ ಮೇಲೆ ಕ್ಲಿಕ್ ಮಾಡಿ
4) ಬಯಸಿದ ಸೆಲೆಬ್ರಿಟಿಗಳ ವಾಯ್ಸ್ ಅನ್ನು ಆದ್ಯತೆಯ ಭಾಷೆಯಲ್ಲಿ ಆಯ್ಕೆಮಾಡಿ
5) ವಾಯ್ಸ್ ಅನ್ನು ಸಕ್ರಿಯಗೊಳಿಸಲು ‘ದೃಢೀಕರಿಸಿ’ ಮೇಲೆ ಕ್ಲಿಕ್ ಮಾಡಿ
6) ಆಯ್ದ ಸೆಲೆಬ್ರಿಟಿಗಳ ವಾಯ್ಸ್ನಲ್ಲಿ ಅಪ್ಡೇಟ್ ಮಾಡಿದ ಭಾಷೆಯೊಂದಿಗೆ ಸಾಧನವು ಕೆಲವೇ ಗಂಟೆಗಳಲ್ಲಿ ರೀಬೂಟ್ ಆಗುತ್ತದೆ
PhonePe ಇತ್ತೀಚೆಗೆ ತನ್ನ ಸ್ಮಾರ್ಟ್ಸ್ಪೀಕರ್ಗಳಲ್ಲಿ ಪ್ರಸಿದ್ಧ ಭಾರತೀಯ ನಟ, ಶ್ರೀ.ಅಮಿತಾಭ್ ಬಚ್ಚನ್ ಅವರ ಸಹಯೋಗದೊಂದಿಗೆ ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಸೆಲೆಬ್ರಿಟಿ ವಾಯ್ಸ್ ಫೀಚರ್ ಅನ್ನು ಬಿಡುಗಡೆ ಮಾಡಿತ್ತು. ಇದರೊಂದಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಭಾಷೆಗಳಲ್ಲಿ ಹೊರತರುವ ಯೋಜನೆಯನ್ನೂ ಹಮ್ಮಿಕೊಂಡಿತ್ತು. PhonePe ಸ್ಮಾರ್ಟ್ಸ್ಪೀಕರ್ಗಳನ್ನು ಮಾರುಕಟ್ಟೆಯಲ್ಲಿ ಎದ್ದು ಕಾಣುವಂತೆ ಮಾಡುವ ಇತರ ಕೆಲವು ವೈಶಿಷ್ಟ್ಯಗಳೆಂದರೆ, ಪೋರ್ಟಬಿಲಿಟಿ, ಅತ್ಯುತ್ತಮ-ದರ್ಜೆಯ ಬ್ಯಾಟರಿ, ಗದ್ದಲದ ವಾತಾವರಣದಲ್ಲಿಯೂ ಉತ್ತಮ ಆಡಿಯೊ ಸ್ಪಷ್ಟತೆ ಮತ್ತು ಕಾಂಪ್ಯಾಕ್ಟ್ ಹಾಗೂ ಬಹುಮುಖ ಫಾರ್ಮ್ ಫ್ಯಾಕ್ಟರ್. ಇವುಗಳಿಂದ ಕಿಕ್ಕಿರಿದ ಕೌಂಟರ್ಗಳಲ್ಲೂ ವ್ಯಾಪಾರಿಗಳು ಅದನ್ನು ಸುಲಭವಾಗಿ ಬಳಸಲು ಸಾಧ್ಯವಾಗುತ್ತದೆ. ಈ ಹಿಂದೆ ಫೀಚರ್ ಫೋನ್ಗಳನ್ನು ಬಳಸುತ್ತಿದ್ದ ವ್ಯಾಪಾರಿಗಳು SMS ಮೇಲೆ ಹೆಚ್ಚು ಅವಲಂಬಿತರಾಗಿದ್ದರು. ಆದರೆ ಈಗ ಅವರು PhonePe ಸ್ಮಾರ್ಟ್ಸ್ಪೀಕರ್ಗಳನ್ನು ಉಪಯೋಗಿಸುತ್ತಿದ್ದು, ಪಾವತಿ ಮೌಲ್ಯೀಕರಣದ ಉತ್ತಮ ಅನುಭವವನ್ನು ಪಡೆಯುತ್ತಿದ್ದಾರೆ. PhonePe ಸ್ಮಾರ್ಟ್ಸ್ಪೀಕರ್ಗಳು 4 ದಿನಗಳ ಬ್ಯಾಟರಿ ಬಾಳಿಕೆ, ಮೀಸಲು ಡೇಟಾ ಸಂಪರ್ಕ, ಸುಲಭವಾಗಿ ಬಳಸುವಂತಾಗಲು ಮೀಸಲಾದ ಬ್ಯಾಟರಿ ಲೆವೆಲ್ LED ಇಂಡಿಕೇಟರ್, ಬ್ಯಾಟರಿ ಲೆವೆಲ್ ಕಡಿಮೆಯಾದರೆ ಆಡಿಯೊ ಅಲರ್ಟ್ಗಳು ಮತ್ತು ಕೊನೆಯ ಬಾರಿಯ ವ್ಯವಹಾರಕ್ಕೆ ಮೀಸಲಾದ ರಿಪ್ಲೇ ಬಟನ್ಗಳನ್ನು ಹೊಂದಿದ್ದು, ಭಾರತದ ಬಹು ಭಾಷೆಗಳಲ್ಲಿ ವಾಯ್ಸ್ ಪೇಮೆಂಟ್ ನೋಟಿಫಿಕೇಶನ್ಗಳನ್ನು ಒದಗಿಸುತ್ತವೆ. ವ್ಯಾಪಾರಿಗಳಿಗೆ ಇಂತಹ ಅನುಕೂಲವನ್ನು ನೀಡುವ ಮೂಲಕ, PhonePe ಮಾರುಕಟ್ಟೆಯಲ್ಲಿ PhonePe ನ ಸ್ಮಾರ್ಟ್ಸ್ಪೀಕರ್ಗಳ ಯಶಸ್ವಿ ಅಳವಡಿಕೆಯನ್ನು ಕಾಣುತ್ತಿದೆ. ಆದ್ದರಿಂದ ಡಿಜಿಟಲ್ ಪಾವತಿಗಳ ಹೆಚ್ಚಳವನ್ನು ಸಕ್ರಿಯಗೊಳಿಸುತ್ತದೆ.
PhonePe ಗ್ರೂಪ್ ಬಗ್ಗೆ:
PhonePe ಗ್ರೂಪ್ ಭಾರತದ ಪ್ರಮುಖ ಫಿನ್ಟೆಕ್ ಕಂಪನಿಯಾಗಿದೆ. ಇದರ ಪ್ರಮುಖ ಉತ್ಪನ್ನವಾದ PhonePe ಡಿಜಿಟಲ್ ಪಾವತಿ ಆ್ಯಪ್ ಅನ್ನು 2016ರ ಆಗಸ್ಟ್ನಲ್ಲಿ ಪ್ರಾರಂಭಿಸಲಾಯಿತು. ಕೇವಲ 7 ವರ್ಷಗಳಲ್ಲಿ, ಕಂಪನಿಯು 515 ಮಿಲಿಯನ್ಗೂ ಹೆಚ್ಚು ನೋಂದಾಯಿತ ಬಳಕೆದಾರರು ಮತ್ತು 38 ಮಿಲಿಯನ್ ವ್ಯಾಪಾರಿಗಳ ಡಿಜಿಟಲ್ ಪಾವತಿ ಸ್ವೀಕಾರ ಜಾಲದೊಂದಿಗೆ, ಭಾರತದ ಪ್ರಮುಖ ಗ್ರಾಹಕ ಪಾವತಿ ಆ್ಯಪ್ ಆಗಿ ವೇಗವಾಗಿ ಬೆಳೆಯುತ್ತಿದೆ. ವಾರ್ಷಿಕ ಒಟ್ಟು ಪಾವತಿ ಮೌಲ್ಯ (TPV) USD 1.4 ಟ್ರಿಲಿಯನ್ನೊಂದಿಗೆ 215 ಮಿಲಿಯನ್ಗೂ ಹೆಚ್ಚು ದೈನಂದಿನ ವಹಿವಾಟುಗಳನ್ನು PhonePe ಪ್ರಕ್ರಿಯೆಗೊಳಿಸುತ್ತದೆ.
ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ನಾಯಕತ್ವವನ್ನು ಹೊಂದಿರುವ PhonePe, ಗ್ರೂಪ್ ಹಣಕಾಸು ಸೇವೆಗಳಿಗೆ (ವಿಮೆ, ಸಾಲ ನೀಡಿಕೆ, ಸಂಪತ್ತು) ಮತ್ತು ಹೊಸ ಗ್ರಾಹಕ ತಂತ್ರಜ್ಞಾನ ವ್ಯವಹಾರ (Pincode – ಹೈಪರ್ಲೋಕಲ್ ಇ-ಕಾಮರ್ಸ್ ಮತ್ತು Indus App Store – ಭಾರತದ ಮೊದಲ ಸ್ಥಳೀಯ ಆಪ್ ಸ್ಟೋರ್) ಗಳಿಗೂ ವಿಸ್ತರಿಸಿದೆ. PhonePe ಗ್ರೂಪ್ ಭಾರತದ ಪ್ರಧಾನ ಕಛೇರಿಯ ತಂತ್ರಜ್ಞಾನ ಕಂಪನಿಯಾಗಿದ್ದು, ಪ್ರತಿಯೊಬ್ಬ ಭಾರತೀಯರಿಗೂ ಹಣದ ಹರಿವು ಮತ್ತು ಸೇವೆಗಳಿಗೆ ಆ್ಯಕ್ಸೆಸ್ ಅನ್ನು ಒದಗಿಸುವ ಮೂಲಕ ಅವರ ಪ್ರಗತಿಗೆ ವೇಗ ನೀಡಲು ಸಮಾನ ಅವಕಾಶವನ್ನು ಒದಗಿಸುವ ಕಂಪನಿಯ ದೃಷ್ಟಿಗೆ ಅನುಗುಣವಾಗಿ ವ್ಯವಹಾರಗಳ ಪೋರ್ಟ್ಫೋಲಿಯೊವನ್ನು ಹೊಂದಿದೆ.